Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ವೈದ್ಯರ ಮೇಲೆ ಗುಂಡಿನ ದಾಳಿ ಮಾಡಿದ ಆರೋಪಿಗಳಿಬ್ಬರ ಬಂಧನ

ವೈದ್ಯರ ಮೇಲೆ ಗುಂಡಿನ ದಾಳಿ ಮಾಡಿದ ಆರೋಪಿಗಳಿಬ್ಬರ ಬಂಧನ

ರಾಯಚೂರು. ನಗರದ ಬೆಟ್ಟದೂರು ಆಸ್ಪತ್ರೆಯ ಡಾ.ಜಯಪ್ರಕಾಶ ಪಾಟೀಲ್ ರವರ ಮೇಲೆ ಗುಂ ಡಿನ ದಾಳಿ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ ಎಂದು ಬಳ್ಳಾರಿ ವಲಯದ ಐಜಿಪಿ ಲೋಕೇಶ ಕುಮಾರ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇ ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.31ರಂದು ಬೆಟ್ಟದೂರು ಆಸ್ಪತ್ರೆ ಯಿಂದ ಮಾನವಿ ಕಡೆಗೆ ಹೋಗುತಿರುವಾಗ ವೈದ್ಯರ ಮೇಲೆ ಇಬ್ಬರು ದುಷ್ಕರ್ಮಿಗಳು ಬೈಕ್ ಮೇಲೆ ಬಂದು ಸಾಥ್‌ಮೈಲ್ ಹತ್ತಿರ ಪಿಸ್ತೂಲ್‌ ನಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿ ದ್ದರು, ದುಷ್ಕರ್ಮಿಗಳ ಬಂಧನಕ್ಕೆ ತಂಡ ರಚನೆ ಮಾಡಿ ಅವರನ್ನು ಬಂದಿಸುವಲ್ಲಿ ಯಶಸ್ವಿಯಾ ಗಿದ್ದಾರೆ ಎಂದರು.
ಶರ್ಫುದ್ದಿನ್ ಮತ್ತು ಕಮರುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ. ಡಾ.ಜಯಪ್ರಕಾಶ ಪಾಟೀಲ್ ಅವರು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಚೆಕ್ ಮಾಡಿದ್ದಾರೆ, ಪ್ರಸಿದ್ಧ ವೈದ್ಯರೆಂದು ತಿಳಿದು ಅವರ ಬಗ್ಗೆ ಮಾಹಿ ತಿ ಪಡೆದು ಆಸ್ಪತ್ರೆ ಮತ್ತು ಅವರ ಮೊಬೈಲ್ ನಂಬರ್ ಪಡೆದುಕೊಂಡು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು, ವೈದ್ಯರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ಅವರನ್ನು ಹಿಂಬಾಲಿಸಿಕೊಂಡು ಬಂದು ಹೆದರಿಸುವ ಉದ್ದೇ ಶದಿಂದ ಅಡ್ಡಗಟ್ಟಿ ಪಿಸ್ತೂಲ್ ನಿಂದ ಗುಂಡಿನ ದಾಳಿ ನಡೆಸಿದ್ದರು, ಬಂಧಿತ ಆರೋಪಿಗಳಿಂದ ಪಿಸ್ತೂಲ್ ಮತ್ತು ಬೈಕ್ ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿಸಿದರು.
ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಪೊಲೀ ಸ್‌ ಅಧೀಕ್ಷಕ ಶಿವಕುಮಾರ, ಡಿ.ಎಸ್.ಪಿ ಎಸ್.ಬಿ.ಸತ್ಯನಾರಾಯಣ ರಾವ್, ಸಿಪಿಐ, ಪಿಎಸ್ಐ ಹಾಗೂ ಸಿಬ್ಬಂದಿಗಳು ಇದ್ದರು.

Megha News