Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಆಟೋ ಕಳ್ಳತನ ಆರೋಪಿಗಳ ಬಂಧನ 4 ಆಟೋ ವಶ

ಆಟೋ ಕಳ್ಳತನ ಆರೋಪಿಗಳ ಬಂಧನ 4 ಆಟೋ ವಶ

ರಾಯಚೂರು. ಆಟೋ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ 5 ಲಕ್ಷ ರೂ ಮೌಲ್ಯದ 4 ಆಟೋಗಳನ್ನು ಜಪ್ತಿ ಮಾಡಲಾಗಿದೆ.

ನಗರದ ಬಸ್ ನಿಲ್ದಾಣದಲ್ಲಿ ಪದ್ಮಾವತಿ ನಗರದ ನಿವಾಸಿ ಅಂಬೋಜಿ ಎನ್ನುವವರು ನ.30 ರಂದು ಬೆಳಗ್ಗೆ ಆಟೋ ನಂ ಕೆ.ಎ-36/ಎ-0509, 76,000 ರೂ, ಬೆಲೆ ಬಾಳುವುದನ್ನು ನಿಲ್ಲಿಸಿ ಹೋಗಿದ್ದು, ಕಳ್ಳರು ಕಳ್ಳತನ ಮಾಡಿದ್ದು, ಈ ಕುರಿತು ಸದರ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂ ಡು ತನಿಖೆ ನಡೆಸಿದ ಪೋಲಿಸರು ಆರೋಪಿ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿಸತ ಆರೋಪಿಗಳಿಂದ ಒಟ್ಟು 5 ಲಕ್ಷ ಮೌಲ್ಯದ 4 ಆಟೋಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಪ್ರಕರಣದ ಆರೋಪಿತರ ಪತ್ತೆಗೆ ಜಿಲ್ಲಾ ಪೊಲೀ ಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಕುಮಾರ್. ಆರ್, ಪೊಲೀಸ್ ಉಪಾಧೀಕ್ಷಕ ಸತ್ಯ ನಾರಾಯಣ ರಾವ್.ಎಂ.ಜಿ. ಉಪ-ವಿಭಾಗ ರವರ ಮಾರ್ಗ ದರ್ಶನದಲ್ಲಿ ಸದರಬಜಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುರಾಜ.ಆರ್.ಕಟ್ಟಿಮನಿ, ಪಿ.ಎಸ್‌ಐ ವೈಶಾಲಿ ಝುಳಕಿ, ಸಂಗಮೇಶ್ವರಿ, ಬಸವರಾ ಜೇಶ್ವರಿ, ಸಿಬ್ಬಂದಿಗಳಾದ ಎಎಸ್‌ಐ ಶ್ರೀನಿವಾಸ್, ಪ್ರಭುದಾಸ್, ಕಟ್ಟಿಮನಿ, ಬಸೀರ್ ಹಾಗೂ ಮುಖ್ಯ ಪೇದೆಗಳಾದ ಲಾಲೇಸಾಬ್, ವೆಂಕಟೇಶ್ ಶಿವರಾಜ್ ಮತ್ತು ಪೊಲೀಸ್ ಪೇದೆಗಳಾದ ಬಸವರಾಜ, ರವಿಕುಮಾರ, ಚಂದ್ರಕಾಂತ ಒಳಗೊಂಡ ತಂಡವನ್ನು ರಚಿಸಿ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ ಪ್ರಕರಣದಲ್ಲಿ ಕಳುವಾದ ಆಟೋ ರೀಕ್ಷಾವನ್ನು ಮತ್ತು ಒಟ್ಟು ನಾಲ್ಕು ಆಟೋ ರೀಕ್ಷಾಗಳನ್ನು ಒಟ್ಟು 5,03,000- ಬೆಲೆ ಬಾಳುಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ. ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Megha News