Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಮಂತ್ರಾಲಯ: 3.23 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯ: 3.23 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಾಣಿಕೆ ಹುಂಡಿಯಲ್ಲಿರುವ ನಗದು ಹಣ ಏಣಿಕೆ ಮಾಡಲಾಯಿತು. 29 ದಿನಗಳ ಅವಧಿಯಲ್ಲಿ ಭಕ್ತರಿಂದ ಒಟ್ಟು 3.23 ಕೋಟಿ ಕಾಣಿಕೆ ಸಂಗ್ರಹವಾಗಿದೆ.

ಶ್ರವಣ ಮಾಸದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ದರ್ಶನ ಪಡೆದುಕೊಂಡಿದ್ದು, ನಂತರ ಕಾಣಿಕೆ ಸಮರ್ಪಿ ಸಿದ್ದಾರೆ. ಸಮರ್ಪಿಸಿದ ಕಾಣಿಕೆ ಹುಂಡಿಯಲ್ಲಿದ್ದ 3,18,02,880 ನಗದು ಹಣ, 5,41,600 ಮೌಲ್ಯದ ನಾಣ್ಯಗಳು ಸೇರಿ ಒಟ್ಟು 3,23,44,480 ಹಣ, 156 ಗ್ರಾಂ ಚಿನ್ನ ಹಾಗೂ 1,273 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ಭಕ್ತಿಯಿಂದ ಅರ್ಪಿಸಿದ್ದಾರೆ.ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

Megha News