Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಮೊಬೈಲ್ ಕಳ್ಳತನ ಪತ್ತೆ, ಮಾಲೀಕರಿಗೆ ಹಸ್ತಾಂತರ

ಮೊಬೈಲ್ ಕಳ್ಳತನ ಪತ್ತೆ, ಮಾಲೀಕರಿಗೆ ಹಸ್ತಾಂತರ

ರಾಯಚೂರು. ನಗರದ ಸದರ್ ಬಜಾರ್ ಪೊಲೀಸ್ ಠಾಣಾ ಸರಹದ್ದಿಯಲ್ಲಿ ವಿವಿಧ ಮೊಬೈಲ್‌ಗಳನ್ನು ಕಳ್ಳತನವಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪತ್ತೆ ಮಾಡಿದ್ದು, ಇಂದು ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡ ಮಾಲೀಕರು ಅರ್ಜಿಗಳನ್ನು ನೀಡಿದ್ದು, ಪಿಎಸ್ಐ ಉಮೇಶ ಎನ್. ಕಾಂಬ್ಳೆ ಸಿಬ್ಬಂದಿಯವರೊಂದಿಗೆ ಫೆ. 7 ರಿಂದ ಇಲ್ಲಿಯವರೆಗೆ 4,75,000 ರೂ. ಬೆಲೆ ಬಾಳುವ ವಿವಿಧ ಕಂಪನಿಯ ಒಟ್ಟು 22 ಮೊಬೈಲ್‌ಗಳನ್ನು ಸಿ.ಐ.ಇ.ಆರ್ (CEIR) ಪೋರ್ಟಲ್‌ನಲ್ಲಿ ಹಾಕಿ ಪತ್ತೆ ಮಾಡಿ, ಮೊಬೈಲ್‌ಗಳ ಮಾಲಕರನ್ನು ಠಾಣೆಗೆ ಕರೆಯಿಸಿ ಹಸ್ತಾಂತರಿಸಿದರು.
ಈ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು-1, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು-2 ಹಾಗು ಡಿವೈಎಸ್‌ಪಿ, ಶ್ಲಾಘಿಸಿದರು‌.

Megha News