Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsPolitics NewsState News

ಏಮ್ಸ್ ಮಂಜೂರಾತಿ ಪ್ರಭಾವದ ಮೇಲೆ ಮಂಜೂರಾಗುವದಿಲ್ಲ: ಮೋದಿ ಆಡಳಿತ ಅಭಿವೃದ್ದಿ ಪರ್ವ -ಪ್ರಹ್ಲಾದ ಜೋಷಿ

ಏಮ್ಸ್ ಮಂಜೂರಾತಿ ಪ್ರಭಾವದ ಮೇಲೆ ಮಂಜೂರಾಗುವದಿಲ್ಲ: ಮೋದಿ ಆಡಳಿತ ಅಭಿವೃದ್ದಿ ಪರ್ವ -ಪ್ರಹ್ಲಾದ ಜೋಷಿ

 

ರಾಯಚೂರು:ಏಮ್ಸ್ ಸ್ಥಾಪನೆ ನಿರ್ಧಾರ ತಜ್ಞರ ಸಮಿತಿ ಅಧ್ಯಯನ ವರದಿ ಮೇಲೆ ಅವಲಂಬಿತವಾಗಿದೆ ಹೊರತು ಪ್ರಭಾವದಿಂದ ಏಮ್ಸ್ ಮಂಜೂರು ಆಗವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

ದೇಶದಾಧ್ಯಂತ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳು ಸ್ತಾಪಿಸುವ ತಜ್ಞರ ಸಮಿತಿ ರಚಿಸಿ ವರದಿ ಪಡೆದು ಅವಶ್ಯಕತೆ ಅನುಗುಣವಾಗಿ ನಿರ್ಧರಿಸುತ್ತದೆ. ರಾಜ್ಯ ಸರ್ಕಾರ ಎಡಬಿಡಂಗಿತನ ಬಿಟ್ಟು ಸ್ಪಷ್ಟ ನಿರ್ಧಾರಕ್ಕೆ ಬಂದು ಶಿಫಾರಸು ಮಾಡಬೇಕಾಗುತ್ತದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಒಂದು ಜಿಲ್ಲೆ, ಜೆಡಿಎಸ್ಸ್ ಮತ್ತು ಕಾಂಗ್ರೆಸ್ ಸರ್ಕಾರ ಮೈತ್ರಿ ಸರ್ಕಾರವಿದ್ದಾಗ ಇನ್ನೊಂದು ಜಿಲ್ಲೆ ಶಿಫಾರಸ್ಸು ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ಪತ್ರ ಬರೆದಿದೆ. ಏಮ್ಸ್ ಸ್ಥಾಪಿಸಲು ಸಾವಿರಾರು ಕೋಟಿ ರೂ ಅನುದಾನದ ಅಗತ್ಯವಿದೆ. ಕೇಂದ್ರ ಸರ್ಕಾರ ಏಮ್ಸ್ ಸ್ಥಾಪಿಸುವ ಪೂರ್ವದಲ್ಲಿ ತಜ್ಞರ ಸಮಿತಿ ನೀಡುವ ವರದಿ ಆಧಾರದ ಮೇಲೆ ಅವಲಂಬಿತವಾಗಿದೆ ಎಂದರು.

ದೇಶದಲ್ಲಿ ನರೇಂದ್ರ ಮೋದಿಯವರ 11 ವರ್ಷದ ಆಡಳಿತದಲ್ಲಿ ಯುಗ ಪರಿವರ್ತನೆಯಂತೆ ಅಭಿವೃದ್ದಿ ಬದಲಾವಣೆಯಾಗಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

ದಿನ ನಿತ್ಯದ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್್ಗೆ ಭೇಟಿ ನೀಡಿ: https://youtu.be/FhS-RAFIrlk?si=tZ_K_Vbv5b8o3NT2

ಅವರಿಂದು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, 2008 ರಲ್ಲಿಯುಪಿಎ ಸರ್ಕಾರ ಆಡಳಿತ ಅವಧಿಯಲ್ಲಿದ್ದ ಆರ್ಥಿಕ ಬೆಳವಣಿಗೆ ದಾಖಲೆ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ. ಜಗತ್ತಿನ ನಾಲ್ಕನೇ ಆರ್ಥಿಕ ಬೆಳವಣಗೆ ದೇಶವಾಗಿ ಭಾರತ ಹೊರಹೊಮ್ಮಿದೆ. ಈ.7 ಸಭೆಗೆ ಭಾರತವನ್ನು ಅಹ್ವಾನಿಸಿಲ್ಲ ಎಂದು ಆರೋಪ ಮಾಡಿ ಕಾಂಗ್ರೆಸ್ಸಿಗರು ಮಂಗ್ಯಾ ಆಗ್ಯಾರ ಎಂದು ಟೀಕಿಸಿದರು.ನೆಹರು ಕಾಲದಿಂದ ಇಂದಿರಾಗಾAಧಿ, ರಾಜೀವಗಾಂಧಿಯಿAದ ಹಿಡಿದು ಸೋನಿಯಾಗಾಂಧಿ,ರಾಹಲು ಗಾಂಧಿವರಗೆಗೆ ಬಡತನ ನಿರ್ಮೂಲನೆ ಮಾತನಾಡಿದ್ದಾರೆ ಹೊರತು ನಿರ್ಮೂಲನೆ ಮಾಡಿಲ್ಲ. ಶೇ.11 ರಷ್ಟಿದ್ದ ಬಡತನ ಈಗ ಶೇ.5ಕ್ಕೆ ಇಳಿದಿದೆ. 26 ಕೋಟಿ ಜನರು ಬಡತನದಿಂದ ಹೊರಬಂದಿರುವದನ್ನು ವಿಶ್ವಬ್ಯಾಂಕ್ ಬಹಿರಂಗಪಡಿಸಿದೆ. ಹಿಂದಿನ 60 ವರ್ಷದಲ್ಲಿ 240 ಗೀಗ್ ವ್ಯಾಟ್ ಉತ್ಪಾದನೆಯಾಗುತ್ತಿದ್ದ ವಿದ್ಯುತ್ 440 ಗೀಗ್ ವ್ಯಾಟ್‌ಗೆ ಏರಿಕೆ ಕಂಡಿದೆ.. ಇನ್ ನೇಷನ್ ಒನ್ ಗ್ರಿಡ್ ಘೋಷಣೆ ಮಾಡಿದ್ದಾಗ ನಕ್ಕಿದ್ದ ಕಾಂಗ್ರೆಸ್ ನಾಯಕರು ಪೇಚಿಗೆ ಸಿಲುಕಿಸಿದ್ದಾರೆ. ಕೋವಿಡ್ ಸಂದರ್ಬದಲ್ಲಿ ಲಸಿಕೆಯನ್ನು ಸಂಶೋಧಿಸಿ ಜನರಪ್ರಾಣ ರಕ್ಷಣೆ ಮಾಡಲಾಯಿತು. ಆದರೆ ರಾಜ್ಯ ಸರ್ಕಾರ ನೆಲಕಚ್ಚುವ ದಾರಿಯಲ್ಲಿ ಮುಂದುವರೆದಿದೆ. ಶೇ.60ರಷ್ಟು ಬ್ರಷ್ಟಚಾರ ನಡೆಯುತ್ತಿದೆ ಏಂದು ಗುತ್ತಿಗೆದಾರರ ಆರೋಪಿಸಿದ್ದಾರೆ. ನಿತ್ಯವೂ ಸಿಎಂಬದಲಾವಣೆ ಮಾತುಗಳು ಕೇಳಿಬರುತ್ತಿವೆ. ಅತಿಯಾದ ತುಷ್ಠಿಕರಣದಿಂದ ಸಮಾಜದಲ್ಲಿ ಅಶಾಂತಿ ಉಂಟಾಗಲು ಕಾರಣವಾಗುತ್ತಿದೆ.ಮಂಗಳೂರಿನ್ಲಲ್ಲಿ ಬಿಜೆಪಿ, ವಿಎಚ್‌ಪಿ, ಬಜರಂಗದಳದಕಾರ್ಯಕರ್ತರನ್ನು ಗುರಿ ಮಾಡಲಾಗುತ್ತಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಅಧಿಕಾರಿಗಳ ಮೂಲಕ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಆನರು ಬಿಜೆಪಿ ಸಿದ್ದಾಂತಗಳನ್ನು ಮೆಚ್ಚಿದ್ದಾರೆ ಎಂದರು.

ನರೇAದ್ರ ಮೋದಿಯವರ ಆಡಳಿತಕ್ಕೆ ಮುಖ್ಯಮಂತ್ರಿ ಶೂನ್ಯ ಅಂಕ ನೀಡಿದ್ದಾರೆ. ಅವರ ಅಧಿಕಾರ ಉಳಿಸಿಕೊಳ್ಳಲು ಹೇಳಬೇಕಾಗಿದೆ. ದೇಶ ಜನರೇ ರಾಹುಲಗಾಂಧೀಗೆ ಜೀರೋ ನಾಯಕ್ತತ್ವ ನೀಡಿದ್ದಾರೆ ಎಂದು ಲೇವಡಿ ಮಾಡಿದರು. ಹಣದುಬ್ಬರ ಇಳಿಕೆಯಲ್ಲಿ ಮುಂದುವರೆದಿದೆ. ಬಂಗಾರ ಬೆಲೆ ಏರಿಕೆ ಕಾರಣಗಳೇನು ಎಂಬುದು ಕಾಂಗ್ರೆಸ್ಸ ನಾಯಕರಿಗೆ ಗೊತ್ತಿದೆ. ಆದರೆ ಸುಳ್ಳು ಹೇಳಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯೋಜನೆಗಳಿAದ 48 ವಸ್ತುಗಳ ಬೆಲೆ ಏರಿಕೆ ಮಾಡಿದೆ. ಪೆಟ್ರೋಲ್,ಡಿಸೇಲ್‌ಗಳಬೆಲೆ ಏರಿಕೆ ಕಾಂಗ್ರೆಸ ಸರ್ಕಾರವೇ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಕಾಯ್ದಿರಿಸಿದ್ದರೆ ಪ್ರತಿತಿಂಗಳು ಏಕೆ ಫಲಾನುಭವಿಗಳಿಗೆ ಹಣ ಹಾಕುತ್ತಿಲ್ಲ ಎಂದು ಪ್ರಶ್ನಸಿದರು. ಈ ಸಂದರ್ಬದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ತ್ರಿವಿಕ್ರಮ ಜೋಷಿ, ಗೀರಿಶ ಕನಕವೀಡುಇದ್ದರು

Megha News