Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಮುಂಗಾರು ಸಾಂಸ್ಕೃತಿಕ ಹಬ್ಬದಂಗವಾಗಿ ಮುಂಗಾರು ಕವಿಗೋಷ್ಠಿ

ಮುಂಗಾರು ಸಾಂಸ್ಕೃತಿಕ ಹಬ್ಬದಂಗವಾಗಿ ಮುಂಗಾರು ಕವಿಗೋಷ್ಠಿ

ರಾಯಚೂರು,ಜೂ.05-ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಪ್ರಯುಕ್ತ ಮುನ್ನೂರು ಕಾಪು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಾಹಿತಿ ಹಾಗೂ ಕವಿಗಳ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುನ್ನೂರು ಕಾಪು ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿಭಗತರಾಜ್ ನಿಜಮಕಾರ್  ಹೇಳಿದರು.

ಅವರಿಂದು ನಗರದ ಶ್ರೀ ವೀರಾಂಜನೇಯ ಕಲ್ಯಾಣ
ಮಂಟಪದಲ್ಲಿ ಮುನ್ನೂರು ಕಾಪು ಸಮಾಜದ ಆಯೋಜಿತ ವಿಶೇಷ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕೃಷ್ಣದೇವರಾಯ ಅವರ ನೇತೃತ್ವದಲ್ಲಿ
ವಿಜಯನಗರ ಸಾಮ್ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು 10 ದಿನಗಳ ಕಾಲ ಆಯೋಜಿಸಲಾಗಿತ್ತು.ಆದರೆ ಶ್ರೀ ಕೃಷ್ಣದೇವರಾಯ ವಂಶಸ್ಥರಾದ ಮುನ್ನೂರು ಕಾಪು ಸಮಾಜ ಕಾರಹುಣ್ಣಿಮೆ ಅಂಗವಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ವೈವಿದ್ಯಮ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಯೋಜನೆ ಮಾಡುವ ಮೂಲಕ ಈ ಅತ್ಯಂತ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಎ. ಪಾಪಾರೆಡ್ಡಿ ಅವರು 25ನೇ ವರ್ಷದ ಬೆಳ್ಳಿ ಅಂಗವಾಗಿ ವಿಶೇಷವಾಗಿ ಮುಂಗಾರು ಕವಿಗೋಷ್ಠಿಯನ್ನು ಆಯೋಜನೆ ಮಾಡುವ ಮೂಲಕ ಸಾಹಿತ್ಯಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಹಿತ್ಯ ಲೋಕಕ್ಕೆ ಮುಂಗಾರು ಹಬ್ಬ ಮೆರಗು ತಂದಿದೆ.ರೈತರನ್ನ ಕೃಷಿಯಲ್ಲಿ ಪರಿಚಯ ಮಾಡಿದ್ದೂ ಬಂಡಾಯ ಸಾಹಿತ್ಯ ನಂತರ ರೈತರ ಹಬ್ಬವಾದ ಮುಂಗಾರು ಹಬ್ಬ ಜಿಲ್ಲೆಯ ಸಾಹಿತ್ಯಗಳನ್ನು ಗುರುತಿಸಿರುವುದು ಹೆಮ್ಮೆಯ ಸಂಗಾತಿ.ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ನಡೆಯುವ ಈ ಮುಂಗಾರು ಹಬ್ಬ ಎಲ್ಲಾ ಸಮಾಜದವರನ್ನು ವೇದಿಕೆ ಗುರುತಿಸುವಂತೆ ಮಾಡುತ್ತಿರುವುದು ಇದು ಮುನ್ನೂರು ಕಾಪು ಸಮಾಜದ ಪ್ರಾಬಲ್ಯ ಪ್ರದರ್ಶಿಸುತ್ತಿದೆ.
ಕನ್ನಡ ಸಾಹಿತ್ಯ ಪರಂಪರೆಯನ್ನು ಉಳಿಸುವ ಕಾರ್ಯಮುನ್ನೂರು ಸಮಾಜ ಮಾಡುತ್ತಿದೆ ಎಂದರು.
ಪತ್ತಕರ್ತ ಕೆ.ಸತ್ಯನಾರಾಯಣ ಅವರು ಪ್ರಾಸ್ತವಿಕ ಮಾತನಾಡಿ, ಕಳೆದ 25 ವರ್ಷಗಳಿಂದ ನಿರಂತರವಾಗಿ ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಮತ್ತು ಪಾರಂಪರಿಕ ಕಾರು ಹುಣ್ಣಿಮೆ ಅಂಗವಾಗಿ ಮುಂಗಾರು ಸಾಂಸ್ಕೃತಿಕ ರಾಯಚೂರ ಹಬ್ಬ ಆಯೋಜಿಸುತ್ತ ಬಂದಿದೆ.
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೂಲಕ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಎ. ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಾಂಸ್ಕೃತಿಕ ಸಮಾಜದ ಎಂದು ಗುರುತಿಸಿಕೊಂಡಿದೆ.ಶ್ರೀ ಕೃಷ್ಣದೇವರಾಯ ಇತಿಹಾಸವನ್ನು ಮುನ್ನೂರು ಕಾಪು ಮೆಲಕು ಹಾಕುತ್ತಿದೆ..ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಎ. ಪಾಪಾರೆಡ್ಡಿ ಅವರು ಈ ಹಬ್ಬವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇದು
ಸಾಮಾನ್ಯ ವಿಚಾರವಲ್ಲ ಮುಂಗಾರು ಹಬ್ಬ ರಾಯಚೂರು ಜಿಲ್ಲೆ ಮಾತ್ರವಲ್ಲ ರಾಜ್ಯವೇ ರಾಯಚೂರು ಜಿಲ್ಲೆಯತ್ತ ಗಮನ ಸೆಳೆಯುವ ಮಾಡಿದ ಕೀರ್ತಿ ಪಾಪಾರೆಡ್ಡಿ ಅವರಿಗೆ ಸಲ್ಲುತ್ತದೆ ಎಂದರು. ಈ ವರ್ಷ ಹಬ್ಬಕ್ಕೆ 25 ವರ್ಷಗಳು ತುಂಬಿದ ಮೂರು ದಿನಗಳ ಬದಲಾಗಿ ಈ ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸುವ ಉದ್ದೇಶದಿಂದ, ಎಲ್ಲಾ ಜನ ಸಮುದಾಯ ಈ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಹಿನ್ನೆಲೆಯಲ್ಲಿ ಎಂಟು ದಿನಗಳ ಕಾರ್ಯಕ್ರಮಗಳನ್ನು ಅತ್ಯಂತ ಅದ್ದೂರಿಯಾಗಿ ಆಯೋಜನೆ ಮಾಡಿದೆ. ಮೂರು ದಿನಗಳ ಕಾಲ ಎತ್ತುಗಳ ಭಾರತದ ಕಲ್ಲು ಎಳೆಯುವ ಸ್ಪರ್ಧೆ ನಡೆಯುತ್ತದೆ. ಇದರ ಪೂರ್ವ ಸಾಂಸ್ಕೃತಿಕ, ಸಂಗೀತ, ಸಾಹಿತ್ಯ ಹಾಗೂ ಕ್ರೀಡಾ ಚಟುವಟಿಕೆ ಆಯೋಜಿಸಲಾಗಿದೆ ಎಂದರು. ಮುಂಗಾರು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತ್ಯಗಳು ಹಾಗೂ ಕವಿಗಳು ತಮ್ಮ ಅನಿಸಿಕೆಗಳನ್ನು ಪ್ರಸ್ತುತ ಪಡಿಸಿದರು.
ಮುರಳೀಧರ ಕುಲಕರ್ಣಿ ಕಾರ್ಯಕ್ರಮ ನಿರೂಪಣೆ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಹಾಗೂ ಹಬ್ಬದ ರೂವಾರಿ ಮಾಜಿ ಶಾಸಕರು ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ವೆಂಕಟರಾವ್ ಕುಲಕರ್ಣಿ,ವೆಂಕಟೇಶ ಬೇವಿನಬೆಂಚಿ, ಉಟುಕೂರು ಕೃಷ್ಣಮೂರ್ತಿ, ಕವಿಗಳು ಮುನ್ನೂರು ಕಾಪು ಹಿರಿಯ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.

Megha News