Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ವಿವಿಧ ಗ್ರಾ.ಪಂಗಳಿಗೆ ಯೋಜನಾ ನಿರ್ದೇಶಕರು ಭೇಟಿ ಕಾಮಗಾರಿ ಪರಿಶೀಲನೆ

ವಿವಿಧ ಗ್ರಾ.ಪಂಗಳಿಗೆ ಯೋಜನಾ ನಿರ್ದೇಶಕರು ಭೇಟಿ ಕಾಮಗಾರಿ ಪರಿಶೀಲನೆ

ಲಿಂಗಸೂಗೂರು.ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಾದ ಕಾಳಾಪುರ, ಗೋರೆಬಾಳ ಹಾಗೂ ಈಚನಾಳ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ನರೇಗಾ, ಸ್ವಚ್ಛಭಾರತ ಮೀಷನ್ ಮತ್ತು ಜೆಜೆಎಂ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳನ್ನು ಜಿ.ಪಂ ಯೋಜನಾ ನಿರ್ದೇಶಕರು ಪ್ರಕಾಶ ವಿ ರವರು ಪರಿಶೀಲನೆ ಮಾಡಿದರು.

ಕಾಳಾಪುರು ಮತ್ತು ಈಚನಾಳ ಗ್ರಾ.ಪಂಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ, ಶಾಲಾ ಹೈಟೇಕ್ ಶೌಚಾಲಯ, ಕೂಸಿನ ಮನೆಗೆ ಕೇಂದ್ರಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ಜೊತೆಗೆ ಕಾಮಗಾರಿಗಳಿಗೆ ಸಂಬಂದಿಸಿದ ಕಡತಗಳನ್ನು ಪರಿಶೀಲಿಸಿದರು. ತದನಂತರ ಗೊರೆಬಾಳ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಬೂದು ನೀರು ಸಂಸ್ಕಾರಣ ಘಟಕ, ಘನತ್ಯಾಜ್ಯ ವಿಲೇವಾರಿ ಘಟಕದ ಪೂರ್ವತಯಾರಿ ಬಗ್ಗೆ ತಿಳಿಸಿ, ಜೆಜೆಎಂ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಸದರಿ ಕಾಮಗಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ವೆಂಕಟೇಶ್ ದೇಸಾಯಿ, ಸಹಾಯಕ ನಿರ್ದೇಶಕರು (ಪಂ.ರಾ) ಮಂಜುನಾಥ್ ಜಾವೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಂಬಗೊಂಡ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಹೇಶ, ತಾಂತ್ರಿಕ ಸಂಯೋಜಕ ಹನುಮನಗೌಡ, ಐಇಸಿ ಸಂಯೋಜಕ ಬಾಲಪ್ಪ, ಎಸ್.ಬಿ.ಎಂ ಸಂಯೋಜಕರಾದ ನವಾಜ್, ಭೀಮಣ್ಣ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.

Megha News