Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಮನೆಯಲ್ಲಿ ಕಲ್ಲಂಗಡಿ ಹಣ್ಣು ಸ್ಫೋಟ, ತಜ್ಞರು ಹೇಳಿದ್ದೇನು ?

ಮನೆಯಲ್ಲಿ ಕಲ್ಲಂಗಡಿ ಹಣ್ಣು ಸ್ಫೋಟ, ತಜ್ಞರು ಹೇಳಿದ್ದೇನು ?

ತಿರುವನಂತಪುರಂ: ಅಂಗಡಿಯಿಂದ ಖರೀದಿ ಮಾಡಿಕೊಂಡು ಮನೆಗೆ ತೆಗೆದುಕೊಂಡು ಹೋಗಿದ್ದು, ಮನೆಯಲ್ಲಿ ಇಟ್ಟಿದ್ದ ಕಲ್ಲಂಗಡಿ ಸ್ಫೋಟ ಗೊಂಡಿ ಘಟನೆ ಕೇರಳದ ಪೊನ್ನನಿಯ ನಸ್ರುದ್ದೀನ್ ಎಂಬುವರ​ ಮನೆಯ ಅಡುಗೆ ಕೋಣೆಯಲ್ಲಿ ನಡೆದಿದೆ.

ಹೌದು, ಅಂಗಡಿಯಿಂದ ಖರೀದಿಸಿ ಮನೆಗೆ ತಂದ ಕಲ್ಲಂಗಡಿ ಹಣ್ಣು ಸ್ಫೋಟಿಸಿದೆ, ಈ ಘಟನೆ ಯಿಂದ ಮನೆಯರು ಸುತ್ತಮುತ್ತಲಿನ ಜನರು ಬೆಚ್ಚಿ ಬಿದ್ದಿದ್ದಾರೆ.
ಎಂಇಎಸ್​ ಕಾಲೇಜಿನಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ತರಲಾಗಿತ್ತು. ಅಡುಗೆ ಮನೆಯಲ್ಲಿ ಸ್ಫೋಟಗೊಂಡ ಶಬ್ಧ ಕೇಳಿ ಬೆಚ್ಚಿಬಿದ್ದ ಅಕ್ಕಪಕ್ಕದ ಮನೆಯವರು ಓಡಿ ಬಂದು ನೋಡಲು, ಕಲ್ಲಂಗ ಡಿ ಹಣ್ಣು ಛಿದ್ರಗೊಂಡಿತ್ತು. ಅಲ್ಲದೆ, ನೆಲದ ಮೇಲೆ ಅಲ್ಲಲ್ಲಿ ಕೊಳಕು ವಾಸನೆಯೊಂದಿಗೆ ಕಲ್ಲಂಗಡಿ ಹಣ್ಣಿನ ತುಂಡುಗಳು ಬಿದ್ದಿದ್ದವು.
ಮಾಹಿತಿ ತಿಳಿದು ಆರೋಗ್ಯ ಇಲಾಖೆ ಮತ್ತು ಮುನ್ಸಿಪಾಲಿಟಿಯ ಆಹಾರ ಸುರಕ್ಷತಾ ಅಧಿಕಾರಿಗಳು ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಹಣ್ಣನ್ನು ಖರೀದಿ ಮಾಡಿದ ಅಂಗಡಿಗೆ ತೆರಳಿ ಹಣ್ಣಿನ ಸ್ಯಾಂಪಲ್​ ಪಡೆದು ಪರೀಕ್ಷೆಗೆಂದು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಪರೀಕ್ಷೆ ಮಾಡಿದ ಬಳಿಕ ಸ್ಫೋಟಕ್ಕೆ ಕಾರಣ ಏನೆಂದು ತಿಳಿದುಬರಲಿದೆ.
ತಜ್ಞರು ಹೇಳೋದೇನು?
ಅಮೆರಿಕದಲ್ಲಿ ಪ್ರತಿ ವರ್ಷ 5.1 ಬಿಲಿಯನ್ ಪೌಂಡ್ ಕಲ್ಲಂಗಡಿ ಹಣ್ಣು ತಿನ್ನುತ್ತಾರೆ. ಆದರೆ, ಪ್ರತಿ ವರ್ಷವೂ ಕಲ್ಲಂಗಡಿ ಸ್ಫೋಟದಂತಹ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಅನೇಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಸಾಕಷ್ಟು ಉದಾಹರಣೆಗಳು ಇವೆ. ಆದರೆ, ಕಲ್ಲಂಗಡಿ ಹಣ್ಣು ಯಾಕೆ ಸ್ಫೋಟಿಸುತ್ತದೆ ಎಂಬ ಪ್ರಶ್ನೆಗೆ ನ್ಯೂಯಾರ್ಕ್​ನ ನ್ಯೂಟ್ರಿಷನ್ ಗ್ರೂಪ್​ನ ಸಿಇಒ ಲಿಸಾ ಮಾಸ್ಕೋಯಿಟ್ಜ್ ಇನ್​ಸೈಡ್​ ಎಡಿಸನ್​ ಎಂಬ ಮಾಧ್ಯಮಕ್ಕೆ ವಿವರಿಸಿದ್ದಾರೆ. ತೀವ್ರವಾದ ಶಾಖವು ಕಲ್ಲಂಗಡಿ ಹಣ್ಣುಗಳ ಒಳಗೆ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಬ್ಯಾಕ್ಟೀರಿಯಾವು ಕಲ್ಲಂಗಡಿಯಲ್ಲಿರುವ ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುತ್ತದೆ, ಇದು ಕಾರ್ಬನ್ ಡೈಆಕ್ಸೈಡ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಗಾಳಿಯ ಒತ್ತಡ ನಿರ್ಮಾಣವಾಗಿ, ಕಲ್ಲಂಗಡಿ ಸ್ಫೋಟಿಸುತ್ತದೆ ಎಂದು ಲಿಸಾ ಮಾಸ್ಕೋಯಿಟ್ಜ್ ತಿಳಿಸಿದ್ದಾರೆ. ಕೇರಳ ಪ್ರಕರಣದಲ್ಲೂ ಇದೇ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

Megha News