ರಾಯಚೂರು. ಕೊಲೆ ಆರೋಪಿತನಿಗೆ ಜೀವಾ ವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಸಿಂಧನೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯದೀಶ ಬಿ.ಬಿ. ಜಕಾತಿ ಅವರು ಆದೇಶ ಹೊರಡಿಸಿದ್ದಾರೆ.
ಏಪ್ರೀಲ್ 12, 2018ರಲ್ಲಿ ಆರೋಪಿ ಬಸ್ಸಪ್ಪ ಬೂಪೂರು ಇವರು ಶಿವಪ್ಪ ನೊಂದಿಗೆ ಕೂಲಿ ಹಣದಲ್ಲಿ ಹೆಚ್ಚಿನ ಹಣ ಕೊಡುವಂತೆ ಒತ್ತಾಯಿಸಿ ದಾಗ ಶಿವಪ್ಪನು ಹೆಚ್ಚಿನ ಹಣ ಕೊಡುವುದಿಲ್ಲ ವೆಂದು ವಾದ ಮಾಡಿದ ಹಿನೆಲ್ಲೆಯಲ್ಲಿ ಆರೋಪಿ ಬಸಪ್ಪ ಕೋಪಿತನಾಗಿ ಶಿವಪ್ಪನಿಗೆ ಕೊಡಲಿ ಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದ ಈ ಕುರಿತು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302ರಡಿ ಲಿಂಗಸೂಗುರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿ ಸಿಪಿಐ ವಿನೋದ್ ಮುಕ್ತದಾರ್,ಸಿಪಿಐ ವಿ.ಎಸ್.ಹೀರೆಮಠ ಇವರು ತನಿಖೆ ಕೈಗೊಂಡು ದೋಷರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಿಂಧನೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಬಿ.ಬಿ.ಜಕಾತಿ ಅವರು ವಾದ ವಿವಾದಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ಆರೋಪಿ ಬಸ್ಸಪ್ಪ ಬೂಪೂರು ಇವರಿಗೆ ಕಲಂ 302 ಐಪಿಸಿರ ಅಡಿಯಲ್ಲಿ ಅಪರಾಧ ಮಾಡಿದ್ದಾನೆಂದು ಪರಿಗಣಿಸಿ ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಸರ್ವ ಮಂಗಳ ಸರಕಾರಿ ವಕೀಲರಾಗಿ ಸಾಕ್ಷಿ ವಿಚಾರಣೆ ನಡೆಸಿದ್ದರು.
Megha News > Local News > ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ 10 ಸಾವಿರ ದಂಡ ವಿಧಿಸಿ ಆದೇಶ
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ 10 ಸಾವಿರ ದಂಡ ವಿಧಿಸಿ ಆದೇಶ
Tayappa - Raichur02/09/2023
posted on

Leave a reply