ರಾಯಚೂರು.ಕೃಷಿ ವಿಶ್ವ ವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಸ್ನಾತಕ ಪದವಿಯಲ್ಲಿ 23 ಚಿನ್ನದ ಪದಕ, ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ, ಡಾಕ್ಟರೇಟ್ ಪದವಿಗೆ 13 ಚಿನ್ನದ ಪದಕಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು.
ನಗರದ ಕೃಷಿ ವಿಶ್ವ ವಿದ್ಯಾಲಯದ ಪ್ರೇಕ್ಷಾ ಗೃಹ ದಲ್ಲಿ ಕೃಷಿ ವಿವಿಯ 13ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ನಗದು ಬಹುಮಾನ ವಿತರಿಸಿದರು.
ವಿದ್ಯಾರ್ಥಿ ಸಾಗರ್ ಯು.ಕಲ್ಲೂರು ಅವರು ಬಿಎಸ್‌ಸಿ ಪದವಿಯಲ್ಲಿ 5 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ, ವಿದ್ಯಾರ್ಥಿನಿ ದಿವ್ಯಾ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕರಡಿ ಬಸವ ಅವರು 3 ಚಿನ್ನದ ಪದಕ ಪಡೆದಿದ್ದಾರೆ.
ಬಿಟೆಕ್ ಪದವಿ ( ಕೃಷಿ ಇಂಜಿನಿಯರಿಂಗ್) ನಲ್ಲಿ ಶೋಭಾ ಆರ್.ಧನಗೊಂಡ ಇವರು 5 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಒಟ್ಟು ಸ್ನಾತಕ ಪದವಿಯಲ್ಲಿ 23 ಚಿನ್ನದ ಪದಕ, ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ, ಡಾಕ್ಟರೇಟ್ ಪದವಿಯಲ್ಲಿ 13 ಚಿನ್ನದ ಪದಕಗಳನ್ನು ರಾಜ್ಯಪಾಲರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕುಲಪತಿ ಡಾ.ಹನುಮಂತಪ್ಪ,
ನವ ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ (ಐಸಿಎಆರ್) ಕೃಷಿ ತಾಂತ್ರಿಕತೆ ಉಪ ಮಹಾ ನಿರ್ದೇಶಕ ಡಾ.ಎಸ್.ಎನ್ ಝಾ.
ಕುಲಸಚಿವ ಎಂ.ವೀರನಗೌಡ, ಬಿಕೆ.ದೇಸಾಯಿ, ಎಸ್.ಬಿ ಗೌಡಪ್ಪ, ಆಡಳಿತಾ ಧಿಕಾರಿ ಜಾಗೃತಿ ದೇಶಮಾನೆ, ಸೇರಿದಂತೆ ಅನೇಕರು ಇದ್ದರು.