ರಾಯಚೂರು. ಕ್ರೆಡಿಟ್ ಆ್ಯಕ್ಸಿಸ್ ಗ್ರಾಮೀಣ ಲಿಮಿಟೆಡ್ ಬ್ಯಾಂಕ್ ವತಿಯಿಂದ 6 ಜನ ವಿದ್ಯಾರ್ಥಿನಿಯರಿಗೆ ತಲಾ 15 ಸಾವಿರ ಸಹಾಯ ಧನವನ್ನು ಜಿಲ್ಲಾ ಅಪರ ಜಿಲ್ಲಾಧಿಕಾರಿ ದುರುಗೇಶ ಅವರು ವಿತರಣೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕ್ರೆಡಿಟ್ ಕ್ರೆಡಿಟ್ ಆ್ಯಕ್ಸಿಸ್ ಗ್ರಾಮೀಣ ಲಿಮಿಟೆಡ್ ಬ್ಯಾಂಕ್ ವತಿಯಿಂದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ 15 ಸಾವಿರ ಸಹಾಯಧನ ನೀಡಿ ಉತ್ತೇಜನ ನೀಡಲಾಗುತ್ತಿದೆ.
ಕ್ರೆಡಿಟ್ ಆ್ಯಕ್ಸಿಸ್ ಗ್ರಾಮೀಣ ಲಿಮಿಟೆಡ್ ಬ್ಯಾಂಕ್ ವತಿಯಿಂದ ಆಯ್ಕೆಯಾದ 6 ಜನ ವಿದ್ಯಾರ್ಥಿನಿಯರಾದ ಪ್ರೀತಿ, ಭಾಗ್ಯಲಕ್ಷ್ಮಿ ದೇವಿ, ನಿಷಾಧ್ ಅಂಜುಮ್, ರೇಣುಕಾ, ಮೌನಿಕಾ ಹಾಗೂ ಅಂಬಿಕಾ ವಿದ್ಯಾರ್ಥಿನಿಯರಿಗೆ ತಲಾ 15 ಸಾವಿರದಂತೆ 1 ಲಕ್ಷ 55 ಸಾವಿರ ಸಹಾಯ ಧನ ನೀಡಲಾಗಿದೆ.
ಈ ಸಂದರ್ಭದಲ್ಲಿ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಶಿವಲಿಂಗಯ್ಯ ಹೆಚ್ ಕೆ, ವಿಭಾ ಗೀಯ ವ್ಯವಸ್ಥಾಪಕ ಗಿರೀಶ ಎ.ಎಸ್, ದೊಡ್ಡಪ್ಪ, ಮುತ್ತಪ್ಪ, ಬೂದೆಪ್ಪ, ರಾಜಕುಮಾರ ಸೇರಿದಂತೆ ಸಿಬ್ಬಂದಿಗಳು ಇದ್ದರು.