ರಾಯಚೂರು. ಆಲಮಟ್ಟಿ ಅಣೆಕಟ್ಟಿನಿಂದ ನೀರು ಹರಿಸಿದ್ದು, ಇದರಿಂದ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ನಾರಾಯಣ ಪುರ ಜಲಾಶಯದಿಂದ ಕೃಷ್ಣೆಗೆ ನಿತ್ಯ 3 ಸಾವಿರ ನೀರು ಹರಿಸುತ್ತಿದ್ದ, ಒಳ ಹರಿವು ಹೆಚ್ಚಳದಿಂದಾಗಿ ಇದೀಗ 3 ಸಾವಿರ ಕ್ಯುಸೆಕ್ ನಿಂದ 65 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ, ಇದರಿಂದಾಗಿ ಪ್ರವಾಹ ಭೀತಿ ಉಂಟಾಗಿದೆ.
ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಹಾರಾಷ್ಟ್ರ, ಮುಂಬೈ ನಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದೆ. ಇದರಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಜಾಸ್ತಿಯಾಗಿದೆ.
ನಾರಾಯಣಪುರ ಜಲಾಶಯದ 24 ಗೇಟ್ಗಳಿಂದ ನಿತ್ಯ 3 ಸಾವಿರ ಕ್ಯೂಸೆಕ್ ನಿಂದ 65 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಸದ್ಯ ನದಿಗೆ ಹರಿಬಿಡಲಾಗಿದೆ. ಹರಿಯುತ್ತಿರುವ ಕೃಷ್ಣ ನದಿ ನೀರಿನಿಂದ ಪ್ರವಾಹ ಭೀತಿ ಎದುರಾಗಿದೆ.
ಆಲಮಟ್ಟಿ ಅಣೆಕಟ್ಟಿನಿಂದ ನಾರಾಯಣಪುರ ಅಣೆಕಟ್ಟಿಗೆ ಒಳಹರಿವು ಹೆಚ್ಚಿದ್ದರಿಂದ, ಇಂದಿನಿಂದ ಕೃಷ್ಣಾ ನದಿಗೆ 65 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತದೆ. ನಾರಾಯಣಪುರ ಅಣೆಕಟ್ಟಿಗೆ ಒಳಹರಿವಿನ ಆಧಾರದ ಮೇಲೆ ನದಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ, ಹಂಚಿನಾಳ, ಕಡದರಗಡ್ಡಿ, ಯಳಗೊಂದಿ, ಯರಗೋಡಿ, ಜಲಾದುರ್ಗ ಹಾಗೂ ದೇವದುರ್ಗ ತಾಲೂಕಿನ ಕೋಳೂರು, ಜೋಳದಡಗಿ, ಆಣೆ ಮಲ್ಲೇಶ್ವರ, ಗಲಗ, ಗೂಗಲ್, ಮದರಕಲ್, ರಾಯಚೂರು ತಾಲೂಕಿನ ಹರಷಿಣಗಿ, ಗುರ್ಜಾ ಪೂರ, ಕರೆಕಲ್, ಕಾಡ್ಲೂರು, ದೊಂಗ ರಾಂಪೂರ,
ದತ್ತಾತ್ರೇಯ, ಸೇರಿದಂತೆ ನದಿ ಪಾತ್ರದ ಹಳ್ಳಿಗಳು
ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳಿವೆ,
ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾದರೆ, ಮತ್ತಷ್ಟು ಹೊರ ಹರಿವು ಕೂಡ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಪ್ರವಾಹ ಭೀತಿ ಎದುರಾಗಿದ್ದು, ಈಗಾಗಲೇ ನದಿ ಪಾತ್ರ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಬೇಕಿದೆ.