Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ಶಾರ್ಟ್ ಸರ್ಕ್ಯೂಟ್, ನಿಂದ ಬೆಂಕಿ 32 ಲಕ್ಷ ಮೌಲ್ಯದ ಸಿಮೆಂಟ್ ಬೆಂಕಿಗೆ ಆಹುತಿ

ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ಶಾರ್ಟ್ ಸರ್ಕ್ಯೂಟ್, ನಿಂದ ಬೆಂಕಿ 32 ಲಕ್ಷ ಮೌಲ್ಯದ ಸಿಮೆಂಟ್ ಬೆಂಕಿಗೆ ಆಹುತಿ

ರಾಯಚೂರು. ಸಿಮೆಂಟ್ ಲಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸಿಮೆಂಟ್ ಮತ್ತು ಲಾರಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಗರ ಹೊರವಲ ಯದ ಬೈ ಪಾಸ್ ರಸ್ತೆಯಲ್ಲಿ ಜರುಗಿದೆ.

ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ನಗರದ ಹೊರ ವಲಯದ ಬೈ ಪಾಸ್ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಾರಿಗೆ ಬೆಂಕಿ ಹತ್ತಿ ಕೊಂಡಿದೆ. ಪರಿಣಾಮ ಲಾರಿ ಮತ್ತು ಲಾರಿಯಲ್ಲಿದ್ದ ಸಿಮೆಂಟ್‌ಗೆ ಬೆಂಕಿ ತಗುಲಿದೆ.
ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲಾಗಿದೆ, ಆದರೂ ಲಾರಿಯಲ್ಲಿದ್ದ ಸಿಮೆಂಟ್ ಮತ್ತು ಲಾರಿಯು ಸಂಪೂರ್ಣ ಅರ್ಧಕ್ಕೂ ಹೆಚ್ಚು ಭಾಗ ಬೆಂಕಿಗೆ ಸುಟ್ಟು ಹೋಗಿದೆ.
ಲಾರಿಯು ಗೋವಾದಿಂದ ಕಲ್ಕತ್ತಾಗೆ ತೆರಳುತ್ತಿದ್ದು ಮಾರ್ಗ ಮದ್ಯ ರಾಯಚೂರು ಹೊರವಲಯದ ಬೈ ಪಾಸ್ ಬಳಿ ಘಟನೆ ನಡೆದಿದೆ‌.
ಟಿಎಸ್-05, ಯುಡಿ, 3477 ನಂಬರ್ ಉಳ್ಳ ಲಾರಿಯು ತೆಲಂಗಾಣ ರಾಜ್ಯದ ನಲಗುಂಡ ಜಿಲ್ಲೆಯ ನ್ಯೂ ಧರ್ಮಾಪುರಂನ ಬಿ.ನಾಗಾರ್ಜುನ ತಂದೆ ಶ್ರೀರಾಮುಲು ಎಂಬುವರಿಗೆ ಸೇರಿದೆ ಎಂದು ತಿಳಿದು ಬಂದಿದೆ‌.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ‌.

Megha News