ರಾಯಚೂರು: ಕೃಷ್ಣ ನದಿಯ ಮೇಲ್ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿದು ಬರುತ್ತಿವೆ. ನದಿ ತೀರದ ವಾಸಿಗಳಿಗೆ ಜಲಚರ ಪ್ರಾಣಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ರಾಯಚೂರು ತಾಲೂಕಿನ ಗ್ರಾಮದ ಹತ್ತಿರ ಮೊಸಳೆಗಳು ಗುಂಪು ಇರುವುದು ಕಂಡು ಬಂದಿದೆ.
ರಾಯಚೂರು ಜಿಲ್ಲೆಯ ಬಲಭಾಗದಲ್ಲಿ ಕೃಷ್ಣ ನದಿ ವಿಶಾಲವಾಗಿ ಹರಿಯುತ್ತಿದೆ. ಆಗಾಗ ನದಿಯ ತೀರದಲ್ಲಿ ಹಾಗೂ ಆಹಾರ ಹರಿಸಿಕೊಂಡು ಗ್ರಾಮಗಳಿಗೆ ಮೊಸಳೆಗಳು ಪ್ರತ್ಯಕ್ಷ ಆಗಿರುವ ಉದಾಹರಣೆಗಳಿದ್ದು, ನಿನ್ನೆಯ ಮೊಸಳೆಗಳು ಹಿಂಡುಗಳು ಕಂಡು ಬಂದಿರುವುದು ಆತಂಕವನ್ನು ಮೂಡಿಸಿದೆ.
ರಾಯಚೂರು ತಾಲೂಕಿನ ಕುರ್ವಕುಲ ಗ್ರಾಮದ ಹತ್ತಿರ ನದಿಯ ತೀರದ ಬಂಡೆಯ ಮೇಲೆ ಹತ್ತಕ್ಕೂ ಹೆಚ್ಚು ಮೊಸಳೆಗಳು ಕಂಡು ಬಂದಿವೆ. ಕುರ್ವಕುಲದ ನೆಲೆಸಿರುವ ದತ್ತಾತ್ರೇಯ ಕ್ಷೇತ್ರಕ್ಕೆ ಜನರು ದರ್ಶನಕ್ಕೆ ತೆರಳಿದಾಗ, ಬೂಟ್‌ನಲ್ಲಿ ಪ್ರಸಾಸಿಗರನ್ನು ಕರೆದುಕೊಂಡು ಹೋಗಲಾಯಿತು. ಈ ವೇಳೆ ಹತ್ತಕ್ಕೂ ಹೆಚ್ಚು ಮೊಸಳೆಗಳ ಹಿಂಡು ಬಂಡೆಯ ಮೇಲೆ ಸೈಲೆಂಟ್ ಆಗಿ ಮಲಗಿದ್ದವು. ಯಾವಾಗ ನೋಡಿ ಚೀರದ ತಕ್ಷಣ ಬಂಡೆಯ ಮೇಲೆ ಮಲಗಿದ್ದ ಮೊಸಳೆಗಳು ನದಿಯಲ್ಲಿ ಇಳಿದು ಹೋದವು.
ಕೃಷ್ಣ ನದಿಗೆ ನೀರು ಹರಿದು ಬರುತ್ತಿರುವುದು ಹಾಗೂ ಜಿಲ್ಲೆಯ ನದಿ ತೀರದಲ್ಲಿ, ನದಿ ತೀರದ ಗ್ರಾಮಗಳಲ್ಲಿ ಮೊಸಳೆಗಳು ಕಂಡು ಬರುತ್ತಿರುವುದ್ದರಿಂದ ಮೊಸಳೆಗಳು ಹೆಚ್ಚಾಗಿವೆ. ಅಲ್ಲದೆ ಮೊಸಳೆಗಳು ಇದ್ದರು ನದಿಯ ತೀರದಲ್ಲಿ ಎಚ್ಚರಿಕೆ ಸಂದೇಶಗಳು ಆಳವಡಿಸಿಲ್ಲ. ಹೀಗಾಗಿ ಅರಣ್ಯ ಇಲಾಖೆಯಿಂದ ಮೊಸಳೆಗಳು ಹೆಚ್ಚಿರುವ ಸ್ಥಳದಲ್ಲಿ ಎಚ್ಚರಿಕೆಯ ಬೋರ್ಡ್ ಹಾಕುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾ ಅರಣ್ಯ ಇಲಾಖೆಯ ಡಿಎಫ್‌ಸಿಒ ಚಂದ್ರಣ್ಣ.ಎ. ರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕೃಷ್ಣ ನದಿ ಮೊಸಳೆಗಳ ಮೆಚ್ಚಿನ ತಾಣವಾಗಿದೆ. ಇಲ್ಲಿ ಹೆಚ್ಚಿನ ಮೊಸಳೆಗಳು ವಾಸವಾಗಿವೆ. ಹೀಗಾಗಿ ಇಲ್ಲಿಯ ವೈಡ್ಲ್ ಲೈಫ್ ತಾಣ ಮಾಡುವ ಹಿನ್ನಲೆಯಲ್ಲಿ ಜಿಲ್ಲೆಯ ತಾಲೂಕಿನ ಅಧಿಕಾರಿಗಳಿಗೆ ಸರ್ವೆ ಮಾಡಿ ವರದಿ ನೀಡುವಂತೆ ತಿಳಿಸಿದ್ದಾನೆ. ಇದರ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ವೈಡ್ಲ್ ಲೈಫ್ ತಾಣ ಮಾಡುವುದಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎನ್ನುವ ಚಿಂತನೆಯಿದೆ ಎಂದು ತಿಳಿಸಿದ್ದಾರೆ.