ರಾಯಚೂರು. ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮೆರವಣಿಗೆ ವೇಳೆ ಡಿಜೆಯಿಂದ ಹೊರ ಹೊಮ್ಮುವ ಶಬ್ದದಿಂದಾಗಿ ಸಾಕಷ್ಟು ಹೃದಯಾ ಭಾಗವಾಗಿ ಸಾವು ಸಂಭವಿಸಿವೆ, ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮತ್ತು ಸರ್ಕಾರದ ಸುತ್ತೋಲೆ ಹೊರಡಿಸಿದ್ದು, ಡಿಜೆ ಸಂಪೂರ್ಣವಾಗಿ ನಿಷೇಧಿಸಿದೆ, ಡಿಜೆ ಅಳವಡಿಸಿದರೆ ಗಣೇಶ ಪ್ರತಿಷ್ಠಾಪನೆ ಸಮಿತಿ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಡಿಎಸ್‌ಪಿ ಎಂಜಿ. ಸತ್ಯ ನಾರಾಯಣ ರಾವ್ ಹೇಳಿದರು.
ನಗರದ ಸದರ್ ಬಜಾರ್ ಪೋಲಿಸ್ ಠಾಣೆಯಲ್ಲಿ ಗಣೇಶ ಹಬ್ಬದ ನಿಮಿತ್ತ ಶಾಂತಿ ಪಾಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಮೆರವಣಿಗೆ ಸಮಯದಲ್ಲಿ ಡಿಜೆ ಅಳವಡಿಸಿ ಹೊರ ಬರುವ ಕರ್ಕಶ ಶಬ್ದದಿಂದ ಸಾಕಷ್ಟು ಪ್ರಮಾಣದಲ್ಲಿ ಹೃದಯಾಘಾತಗಳು ಸಂಭವಿಸಿವೆ, ಡಿಜೆಯಿಂದಾಗಿ ಮಕ್ಕಳ, ವೃದ್ಧರು ಮಹಿಳೆಯರು ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ, ಸುಪ್ರೀಂಕೋರ್ಟ್ ಕಟ್ಟು ನಿಟ್ಟಾಗಿ ಆದೇಶ ಮಾಡಿದೆ, ಸಂಪೂರ್ಣವಾಗಿ ಡಿಜೆ ನಿಷೇಧಿಸಿದೆ, ಈಗಾಗಲೇ ಡಿಜೆ ಬುಕ್ಕಿಂಗ್ ಮಾಡಿದರು ಹಿಂಪಡೆಯಬೇಕು, ಒಂದುವೇಳೆ ಡಿಜೆ ಅಳವಡಿಸಿದರೆ ಪ್ರಕರಣ ದಾಖಲಿಸಲಾಗುತ್ತದೆ, ಡಿಜೆ ಅಳವಡಿಕೆಗೆ ಜನಪ್ರತಿನಿಧಿಗಳಿಂದ ಪರವಾನಗಿ ತಂದರೂ ಸಹ ಪರವಾನಗಿ ನೀಡುವುದಿಲ್ಲ ಎಂದರು.
ಗಣೇಶ ವಿಸರ್ಜನೆಯ ಮೆರವಣಿಗೆ ಶಾಂತಿಯಿಂದ ನಡೆಯಬೇಕು, ಭಕ್ತಿ ಭಾವದಿಂದ ಮೆರವಣಿಗೆ ನಡೆಸಬೇಕು, ಗಣೇಶ ಪ್ರತಿಷ್ಠಾಪನೆಗೆ ಸರ್ಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು, ಗಣೇಶ ಪ್ರತಿಷ್ಠಾಪನೆ ಮಾಡಲು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲು ನಗರಸಭೆ ಮತ್ತು ಗ್ರಾಮೀಣ ಭಾಗದಲ್ಲಿ ಪಂಚಾಯತಿಯಿಂದ ಪರವಾನಗಿ ಪಡೆಯಬೇಕು, ರಸ್ತೆ ಮಧ್ಯ ಬದಿಯಲ್ಲಿ ಪ್ರತಿಷ್ಠಾಪನೆ ಮಾಡಿದಲ್ಲಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಖಾಸಗಿ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲು ಸ್ಥಳದ ಮಾಲೀಕರಿಂದ ಪರವಾನಗಿ ಪಡೆಯಬೇಕು, ಪ್ರತಿಷ್ಠಾಪನೆ ಸ್ಥಳದಲ್ಲಿ ವಿದ್ಯುತ್ ಸಂಪರ್ಕಕ್ಕೆ ನಿಗದಿತ ಶುಲ್ಕವಿರುತ್ತದೆ, ಅದನ್ನು ಪರವಾನಗಿ ತೆಗೆದುಕೊಳ್ಳಬೇಕು ಮಾಡಬೇಕು ಎಂದು ತಿಳಿಸಿದರು.
ಪ್ರತಿಷ್ಠಾಪನೆ ಮಾಡಿದ ಗಣೇಶ ವೀಕ್ಷಣೆಗೆ ಮಹಿಳೆಯರು ಸಾರ್ವಜನಿಕರು ಆಗಮಿಸುತ್ತಾರೆ, ಗ್ಯಾಲರಿ ವ್ಯವಸ್ಥೆ ಮಾಡಿಕೊಡಿಕೊಳ್ಳಿ, ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಸೂಕ್ತವಾಗಿದ್ದು ಅಹಿತಕರ ಘಟನೆ ನಡೆಯದಂತೆ ಸಹಕಾರಿಯಾ ಗುತ್ತದೆ, ಈ ಎಲ್ಲಾ ಪರವಾನಗಿ ಇದ್ದಲ್ಲಿ ಮೈಕ್ ಪರವಾನಗಿ ನೀಡಲಾಗುತ್ತದೆ, ಕೇವಲ ಎರಡು ಸ್ಫೀಕರ್ ಅಳವಡಿಸಿ, ಡಿಜೆಗೆ ಅನುಮತಿ ಇಲ್ಲ, ಸುಪ್ರೀಂಕೋರ್ಟ್ ಈ ಭಾರಿ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಗಣೇಶ ಸಮಿತಿಯಗಳು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಹೆಚ್ಚಿನ ಒತ್ತು ನೀಡಿ, ಪಿಒಪಿ ಗಣೇಶ ನಿಷೇಧಿಸಿ ಪರಿಸರ ಮಾಲಿನ್ಯ ತಡೆಯಿರಿ ಎಂದರು.
ಪಿಎಸ್‌ಐ ನಾಗರಾಜ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಮೆರವಣಿಗೆ ಯಲ್ಲಿ ಶಾಂತಿ ಕಾಪಾಡಿ, ಪ್ರತಿಷ್ಠಾಪನೆ ಸ್ಥಳದಲ್ಲಿ ಗಣೇಶ ಸಮಿತಿಯೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಅವರ ಜವಾಬ್ದಾರಿ ಯಾಗಿದೆ ಯಾವುದೇ ಅನಾವುತಕ್ಕೆ ದಾರಿ ಮಾಡಿಕೊ ಡಬೇಡಿ, ಗಣೇಶ ಮೆರವಣಿಗೆಯಲ್ಲಿ ಅಶಾಂತಿ ಯಾದರೆ ಅದಕ್ಕೆ ತಾವು ಹೊಣೆಗಾರ ರಾಗುತ್ತೀರಿ ಎಂದರು.
ಪಿಎಸ್‌ಐ, ಪ್ರಕಾಶ ಡಂಬಳ, ಸಿಪಿಐ ಪ್ರದೀಪ, ಹಾಗೂ ಗಣೇಶ ಸಮಿತಿಯ ಮುಖಂಡರಾದ ಶ್ರೀನಿವಾಸ ಪತಂಗೆ, ಅಶೋಕ ಕುಮಾರ ಜೈನ, ಕಲ್ಯಾಣಕರ್, ಮಹಾವೀರ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪಿಎಸ್‌ಐ ಮಂಜುನಾಥ, ಸಂಚಾರಿ ಠಾಣೆ ಪಿಎಸ್‌ಐ ವೆಂಕಟೇಶ, ಯರಗೇರಾ ಪಿಎಸ್‌ಐ, ಮಾರ್ಕೆಟ್ ಯಾರ್ಡ್ ಪಿಎಸ್‌ಐ ಸೇರಿದಂತೆ ಗಣೇಶ ಸಮಿತಿಯ ಮುಖಂಡರು ಭಾಗವಹಿಸಿದ್ದರು.