ರಾಯಚೂರು. ಶಿಕ್ಷಕನಾಗುವ ಕನಸು ನನಸಾ ಗದೇ ಇರುವುದರಿಂದ ವ್ಯಕ್ತಿವೊಬ್ಬ ಸರ್ಕಾರದ ಆಡಳಿತ ವ್ಯವಸ್ಥೆಯ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.
ದೇವದುರ್ಗ ತಾಲೂಕಿನ ಚಿಕ್ಕ ಬುದೂರು ಗ್ರಾಮ ದ ಚನ್ನಬಸವ (25) ಮೃತಪಟ್ಟ ಯುವಕ ಎನ್ನಲಾಗಿದೆ.
ಪಟ್ಟಣದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ.ಈ ಕುರಿತು ದೇವದುರ್ಗ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಹಿನ್ನೆಲೆ: ಚಿಕ್ಕ ಬೂದೂರಿನ ಚನ್ನಬಸವ ಬಹು ವರ್ಷಗಳಿಂದ ಶಿಕ್ಷಕನಾಗುವ ಕನಸು ಕಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಬರೆದು 6-8ನೇ ತರಗತಿ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿದ್ದ. 2022ರ ನೇಮಕಾತಿ ಪಟ್ಟಿಯಲ್ಲಿ ಹೆಸರು ಇತ್ತು. ಆದರೆ, ಕೊನೆ ಕ್ಷಣದಲ್ಲಿ ಪಟ್ಟಿಯಿಂದ ಹೆಸರು ಕೈ ತಪ್ಪಿತ್ತು.
ಮತ್ತೊಮ್ಮೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆ ಬರೆದಿದ್ದ ಚನ್ನಬಸವ ಪರೀಕ್ಷೆಯಲ್ಲಿ ಫೇಲಾಗಿದ್ದ, ಆದರೂ ಶಿಕ್ಷಕನಾಗುವ ಛಲವನ್ನು ಬಿಡದೆ ದೇವದುರ್ಗ ಪಟ್ಟಣದಲ್ಲಿ ಪ್ರತೇಕ ರೂಮ್ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ, ಶಿಕ್ಷಕನಾಗುವ ಕನಸು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಜೊತೆಗೆ ಮತ್ತೊಮ್ಮೆ ಪರೀಕ್ಷೆಯಲ್ಲಿ ಫೇಲಾಗಿದ್ದ ಬೇಸರವಾಗುತ್ತು,
ಏಕಾಏಕಿಯಾಗಿ ಅನಕ್ಷರಸ್ಥರಾಡಳಿತ ವ್ಯವಸ್ಥೆ ವಿರುದ್ಧ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ, ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದೆ. ಆಡಳಿತ ವ್ಯವಸ್ಥೆಗೆ ನನ್ನ ದಿಕ್ಕಾರವಿ ರಲಿ ಎಂದು ಡೆತ್ ನೋಟ್ ಬರೆದಿಟ್ಟು ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ನಡುವೆ, ಯಾರೂ ಕೂಡಾ ಯಾರ ವಿರುದ್ಧವೂ ದೂರು ನೀಡಬಾರದು ಎಂದೂ ಅವರು ಮನವಿ ಮಾಡಿದ್ದಾರೆ. ನನ್ನ ಕುಟುಂಬ ಅನಕ್ಷರಸ್ಥರಾಗಿದ್ದು, ಹೀಗಾಗಿ ಅವರನ್ನು ಬಳಸಿಕೊಂಡು ಯಾರಾದರೂ ದೂರು ನೀಡಬಹುದು. ಅದನ್ನು ಪರಿಗಣಿಸಬಾರದು ಎಂದು ಡೆತ್ ನೋಟ್‌ನಲ್ಲಿ ಮನವಿ ಮಾಡಿದ್ದಾನೆ.
ಪೊಲೀಸರು ಕುಟುಬಸ್ಥರಿಗೆ ಮಾಹಿತಿ ನೀಡಿದ್ದಾರೆ.