Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal News

ವಸತಿ ನಿಲಯದ ವಾರ್ಡನ್ ಮೇಲೆ ಹಲ್ಲೆ ಮಾಡಿದ ಆರೋಪಿ ಬಂಧನ

ವಸತಿ ನಿಲಯದ ವಾರ್ಡನ್ ಮೇಲೆ ಹಲ್ಲೆ ಮಾಡಿದ ಆರೋಪಿ ಬಂಧನ

ರಾಯಚೂರು. ಲಿಂಗಸುಗೂರು ನಗರದ ಬಾಲಕಿಯರ ನಿಲಯದಲ್ಲಿ ವಾರ್ಡನ್ ಮೇಲೆ ಹಲ್ಲೆ ಮಾಡಿದ ಮಲ್ಲರೆಡ್ಡಿ ಎನ್ನುವ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಅವರು ತಿಳಿಸಿದ್ದಾರೆ.

ಆ.23 ರಂದು ಸಂಜೆ 4:30 ಗಂಟೆಗೆ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ
ಮಲ್ಲರೆಡ್ಡಿ ಎಂಬುವವರು ಅಕ್ರಮವಾಗಿ ಬಾಲಕಿಯರ ವಸತಿನಿಲಯ ಪ್ರವೇಶಿಸಿ, ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಪ್ರಯತ್ನಿಸಿದಾಗ ವಸತಿ ನಿಲಯದ ಕಿರಿಯ ನಿಲಯ ಮೇಲ್ವಿಚಾರಕ ಶರಣಪ್ಪ ರವರು,
ಚಿತ್ರೀಕರಣ ಮಾಡಬಾರದೆಂದು ತಡೆಯಲು ಹೋದಾಗ ಮಲ್ಲರೆಡ್ಡಿ ಎಂಬುವವರು ಅವರ ಮೇಲೆ ಏಕಾ ಏಕಿ ದಾಳಿ ಮಾಡಿ, ಹಲ್ಲೆ ಮಾಡಿ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಮೇಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಕಲಂ 353, 323, 332, 504, 506 ಐಪಿಸಿಯಡಿ ಪ್ರಕರಣ ದಾಖಲಿಕೊಂಡು ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Megha News