Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ 4 ಜನ ಪುರಸಭೆಯ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಆದೇಶ

ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ 4 ಜನ ಪುರಸಭೆಯ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಆದೇಶ

ಲಿಂಗಸುಗೂರು. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ನಾಲ್ವರು ಪುರಸಭೆಯ ಸದಸ್ಯರ ಸದಸ್ಯತ್ವ ಅನರ್ಹಗೊ ಳಿಸಿ ಜಿಲ್ಲಾಧಿ ಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.

ಲಿಂಗಸುಗೂರಿನ ಪುರಸಭೆಯ ಸದಸ್ಯರಾದ ಫಾತಿಮಾ ಮೌಲಾಸಾಬ, ಮೌಲಾಸಾಬ ಚೋಟು ಸಾಬ ಗೌಳಿ, ಎ. ಪ್ರಮೋದ ಕುಮಾರ ವಸಂತ ಮಾಧವರಾವ್, ಶರಣಪ್ಪ ಬಸಪ್ಪ ಕೆಂಗೇರಿ ಇವರ ಸದಸ್ಯತ್ವ ಅನರ್ಹಗೊಳಿಸಿದ್ದಾರೆ‌.
ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪುರಸಭೆಗೆ ಆಯ್ಕೆ ಯಾಗಿದ್ದ ಸದಸ್ಯರು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೂನ್ 2 ರಂದು ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತವಾಗಿ ದೂರು ನೀಡಿದ್ದರು.
ಜಿಲ್ಲಾಧಿಕಾರಿಗಳು ಸದಸ್ಯರಿಗೆ ನೋಟಿಸ್ ಜಾರಿ ಮಾಡಿ, ಉತ್ತರ ನೀಡುವಂತೆ ಅವಕಾಶ ನೀಡಿ ದ್ದರು, ಸಮರ್ಪಕವಾಗಿ ಉತ್ತರ ನೀಡುವಲ್ಲಿ ವಿಫರಾದ ಸದಸ್ಯರನ್ನು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ 1987ರ ನಿಯಮದಡಿ ಲಿಂಗಸುಗೂರು ಪುರಸಭೆಯ 4 ಜನ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

Megha News