ರಾಯಚೂರು. ರಾಯಚೂರು ನಗರಸಭೆ ಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಟ್ಟಡ ಪರವಾನಿಗೆ, ಖಾತಾ, ವ್ಯಾಪಾರ ಪರವಾನಿಗೆ ಜಲನಿಧಿ ಸೇರಿದಂತೆ ಇನ್ನಿತರ ಸೇವೆಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೇವೆಗಳನ್ನು ಪ್ರಾರಂಭಿಸಲಾಗಿದ್ದು, ಇದರ ಉಸ್ತುವಾರಿಗಾಗಿ ನೇಮಕಗೊಂಡಿದ್ದ ಸೀನಿಯರ್ ಪ್ರೋಗ್ರಾಮರ್ ಶಾಂತಕುಮಾರ ಹಾಗೂ ವಿಷಯ ನಿರ್ವಾಹಕರು ಅನಧಿಕೃತ ಚಟುವಟಿಕೆಗಳನ್ನು ಮಾಡಿದ್ದರ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತರು ನೋಟೀಸ್ ನೀಡಿದ್ದಾರೆ.
ಜು.24ರಂದು ರಾಯಚೂರು ನಿವಾಸಿ ಸೈಯದ್ ಶಂಶುದ್ದೀನ್ ಅವರು ನಗರಸಭೆ ಸೀನಿಯರ್ ಪ್ರೋಗ್ರಾಮರ್ ಹಾಗೂ ವಿಷಯ ನಿರ್ವಾಹಕರ ವಿರುದ್ಧ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದು, ದೂರಿನಲ್ಲಿ ನಗರಸಭೆಯ ಆನ್ಲೈನ್ ಸೇವಗಳ ಮೂಲಕ ಅರ್ಜಿ ಸಲ್ಲಿಸುವ ಕಾರ್ಯಗಳನ್ನು ನೋಡಿಕೊಳ್ಳಲು ಹಾಗೂ ತಾಂತ್ರಿಕ ದೋಷ ಸರಿಪಡಿಸಲು ಉಸ್ತುವಾರಿಗಾಗಿ ಶಾಂತಕುಮಾರ್ ಅವರನ್ನು ನೇಮಕ ಮಾಡಿದ್ದು ಆದರೆ ಶಾಂತಕುಮಾರ ಅವರು ಪೌರಾಯುಕ್ತರ ಡಿಜಿಟಲ್ ಕೀ ಬಳಸಿ ಪೌರಾಯುಕ್ತರಿಗೆ ತಿಳಿಸದೇ ಕಟ್ಟಡ ವಿಷಯ ನಿರ್ವಾಹಕನೊಮದಿಗೆ ಸೇರಿ ಬಹಳಷ್ಟು ಅವ್ಯವಹಾರದಲ್ಲಿ ತೊಡಗಿರುವುದಾಗಿ ತಿಳಿಸಿದ್ದರು. ದೂರನ್ನು ಸ್ವೀಕರಿಸಿದ ಪೌರಾಯುಕ್ತರು ಸೀನಿಯರ್ ಪ್ರೋಗ್ರಾಮರ್ ಶಾಂತಕುಮಾರ ಅವರಿಗೆ ನೋಟೀಸ್ ನೀಡಿದ್ದು, ದೂರಿಗೆ 3 ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿಯನ್ನು ಕಚೇರಿಗೆ ಸಲ್ಲಿಸಲು ತಿಳಿಸಿದ್ದಾರೆ ತಪ್ಪಿದ್ದಲ್ಲಿ ಶಿಸ್ತು ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.