ರಾಯಚೂರು. ಚೈತ್ರಾ ಕುಂದಾಪುರ & ಗ್ಯಾಂಗ್ ಉದ್ಯಮಿ ಗೋವಿಂದ ಪೂಜಾರಿಗೆ ಕೋಟಿ ಕೋಟಿ ಪಂಗನಾಮ ಹಾಕಿರುವ ಘಟನೆ ಬೆನ್ನಲ್ಲೆ
ಇಂತಹದ್ದೆ ಮತ್ತೊಂದು ಟಿಕೇಟ್ ವಂಚನೆ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಬಿಜೆಪಿಯಿಂದ ಟಿಕೇಟ್ ಕೊಡಿಸು ವುದಾಗಿ ಸಾಕಷ್ಟು ಪ್ರಕರಣಗಳು ಲೋಕಸಭೆ ಚುನಾವಣಾ ಹೊತ್ತಿನಲ್ಲೆ ಹೊರ ಬರುತ್ತಿವೆ,
ಉಡುಪಿಯ ಉದ್ಯಮಿ ಗೋವಿಂದ ಪೂಜಾರಿಗೆ ಆದಂತಹ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ಗ್ಯಾಂಗ್ ಜೈಲು ಸೇರಿದ್ದಾರೆ.ಇದೇ ರೀತಿಯಲ್ಲಿ ಬಿಜೆಪಿ ಟಿಕೇಟ್ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ ಮಾಡಿ ಟೋಪಿ ಹಾಕಿ ರುವ ಪ್ರಕರಣ ಹೊರ ಬರುತ್ತಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಎಸ್ಸಿ ಮೀಸಲು ಕ್ಷೇತ್ರಕ್ಕೆ ರಾಯಚೂರು ತಾಲೂಕಿನ ಗಿಲ್ಲೆಸೂಗುರಿನ ಬಿಜೆಪಿ ಮುಖಂಡ ಜಿ.ತಿಮ್ಮಾರೆಡ್ಡಿ ಎನ್ನುವವರ ಪತ್ನಿ ಗಾಯತ್ರಿ ತಿಮ್ಮಾರೆಡ್ಡಿಗೆ ಟಿಕೇಟ್ ಕೊಡಿಸುವುದಾಗಿ ಬಾರಿ ಪ್ರಯತ್ನ ಪಟ್ಟು
ಲಕ್ಷಾಂತರ ರೂ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಇದೀಗ ಅವರು ಪೋಲಿಸ್ ಮೆಟ್ಟಿ ಲೇರಿದ್ದಾರೆ.
ಗಾಯತ್ರಿ ತಿಮ್ಮಾರೆಡ್ಡಿ ಅವರು ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದನ್ನೆ ಗುರಿಯಾಗಿಸಿ ಕೊಂಡು ಮೂರು ಜನ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಎಂಬುವರು ಜಿ.ತಿಮ್ಮಾರೆಡ್ಡಿ ಗಿಲ್ಲೆಸುಗೂರು ಅವರಿಂದ 21 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪರಿಚಯ ಇದೆ,
ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥ ಅಂತ ಪರಿಚಯಿಸಿಕೊಂಡಿದ್ದ ವಿಶಾಲ್ ನಾಗ್
ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ ಅವರನ್ನು ನಂಬಿಸಿ ವಂಚಿಸಿದ್ದಾರೆ.
ಟಿಕೇಟ್ ಕೊಡಿಸದೇ ಇತ್ತ ಹಣವೂ ಬಾರದೆ ಇರುವುದರಿಂದ .ತಿಮ್ಮಾರೆಡ್ಡಿ ಗಿಲ್ಲೆಸೂಗುರು ಅವರು ಈ ಕುರಿತು ಜುಲೈ 19 ರಂದು ಜಿ. ತಿಮ್ಮಾರೆಡ್ಡಿ ಗಿಲ್ಲೆಸೂಗುರು ಅವರು ಮೂವರ ವಿರುದ್ದ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Megha News > Crime News > ಚೈತ್ರಾ ಕುಂದಾಪುರ & ಗ್ಯಾಂಗ್ ಟಿಕೇಟ್ ವಂಚನೆ, ಇಂತಹದ್ದೆ ರಾಯಚೂರು ಮೂಲದವರಿಗೆ ಟಿಕೇಟ್ ನೀಡುವುದಾಗಿ ವಂಚನೆ ಪ್ರಕರಣ ಬೆಳಕಿಗೆ
ಚೈತ್ರಾ ಕುಂದಾಪುರ & ಗ್ಯಾಂಗ್ ಟಿಕೇಟ್ ವಂಚನೆ, ಇಂತಹದ್ದೆ ರಾಯಚೂರು ಮೂಲದವರಿಗೆ ಟಿಕೇಟ್ ನೀಡುವುದಾಗಿ ವಂಚನೆ ಪ್ರಕರಣ ಬೆಳಕಿಗೆ
Tayappa - Raichur16/09/2023
posted on
Leave a reply