ಮಾನ್ವಿ. ತಾಲೂಕಿನ ಪೋದ್ನಾಳ ಗ್ರಾಮದಲ್ಲಿ ಗುರುರಾಜ ಶೆಟ್ಟಿಗೆ ಸೇರಿದ ಗೋದಮಿನಲ್ಲಿ ಜೋಳ ವನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದು ಖಚಿತ ಮಾಹಿತಿ ಮೇರೆಗೆ ಸಹಾಯಕ ಆಯುಕ್ತ ರು, ಆಹಾರ ಇಲಾಖೆಯ ಅಧಿಕಾರಿಗಳು ಪೊಲೀ ಸರ ನೇತೃತ್ವದೊಂದಿಗೆ ದಾಳಿ ನಡೆಸಿ 2352 ಕ್ವಿಂಟಲ್ ಜೋಳವನ್ನು ವಶಪಡಿಸಿ ಕೊಂಡಿದ್ದಾರೆ.
ರಾಜ್ಯ ಸರ್ಕಾರದ ಚಿಹ್ನೆ ಹೊಂದಿರುವ 2325 ಕ್ವಿಂಟಲ್ ಜೋಳ ಎಂದು ದಾಳಿ ವೇಳೆ ತಿಳಿದು ಬಂದಿದೆ.
ಸಹಾಯಕ ಆಯುಕ್ತರು ಹಾಗೂ ಆಹಾರ ಇಲಾ ಖೆ ಉಪ ನಿರ್ದೇಶಕರು ರಾಯಚೂರು ಹಾಗೂ ಮಾನ್ವಿ ತಹಸೀಲ್ದಾರ್ ಇವರ ನೇತೃತ್ವದಲ್ಲಿ ದಾಳಿ ನಡೆಸಿ 4 ಲಾರಿಗಳನ್ನು ವಶಕ್ಕೆ ಪಡೆದುಕೊಂಡಿ ದ್ದಾರೆ.
ನಿನ್ನೆ ನಡೆದ ಜನತಾದರ್ಶನ ಆಹ್ವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಭುರಾಜ್ ಕೊಡ್ಲಿ ಹಾಗೂ
ಹನುಮಂತ ಸೀಕಲ್, ನರಸಪ್ಪ ಜೂಕೂರು ಇವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸಿ, ಗುರುರಾಜ ಶೆಟ್ಟಿಗೆ ಸೇರಿದ ಗೋದಾಮಿನ ಲ್ಲಿ ಸೆ. 22ರಂದು ಪಡಿತರ ಜೋಳ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದೆ ಎಂದು ದೂರು ನೀಡಿದರು. ಈ ಹಿಂದೆಗೂಎ ಸಹ ದೂರ ನೀಡಿ ದ್ದು ಕ್ರಮ ತೆಗೆದುಕೊಂಡಿರಲಿಲ್ಲ, ಸಚಿವರಿಗೆ ದೂರ ನೀಡಿದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲು ಸಚಿವರು ಸೂಚಿಸಿದ್ದರು.
ಅಧಿಕಾರಿಗಳು ದಾಳಿ ನಡೆಸಿ, ಕಲಬುರಗಿಯಿಂದ 2325 ಕ್ವಿಂಟಲ್ ಜೋಳ ಗುರುರಾಜ ಶೆಟ್ಟಿ ಅವರ ಗೋದಾಮಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದರು.ಒಟ್ಟು 4630 ಕ್ವಿಂಟಲ್ ಜೋಳದ ಚೀಲಗಳು ಪತ್ತೆಯಾಗಿದವೆ. ಅಧಿಕಾರಿಗಳು ಜೋಳ ವಶಕ್ಕೆ ಪಡೆದು ಗೋದಾಮು ಸೀಜ್ ಮಾಡಿದ್ದಾರೆ. ಜೋಳ ಸಾಗಾಣೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಗಂಭೀರವಾಗಿ ಕೇಳಿ ಬಂದಿದೆ.