Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Crime News

ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಕ್ರಮವಾಗಿ ಗೃಹ ಬಳಕೆ ಗ್ಯಾಸ ಸಿಲಿಂಡರ್ ಬಳಕೆ, ದಾಳಿ 12 ಸಿಲಿಂಡರ್ ವಶ

ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಕ್ರಮವಾಗಿ ಗೃಹ ಬಳಕೆ ಗ್ಯಾಸ ಸಿಲಿಂಡರ್ ಬಳಕೆ, ದಾಳಿ 12 ಸಿಲಿಂಡರ್ ವಶ

ರಾಯಚೂರು. ಗೃಹ ಬಳಕೆಯ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ಗಳನ್ನು ಹೋಟೆಲ್, ರೆಸ್ಟೋ ರೆಂಟ್‌ಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿ ರುವ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಪೋಲಿಸರ ನೇತೃತ್ವದಲ್ಲಿ ದಾಳಿ ನಡೆಸಿ ಗ್ಯಾಸ್‌ ಸಿಲಿಂಡರ್ ವಶಪಡಿಸಿಕೊಂಡರು.

ನಗರದ ವಿವಿಧ ಹೋಟೆಲ್, ಹಾಗೂ ರೆಸ್ಟೋ ರೆಂಟ್‌ಗಳಲ್ಲಿ ಗೃಹ ಬಳಕೆಯ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್)ಗಳನ್ನು ಅಕ್ರಮವಾಗಿ ಬಳಕೆ ಮಾಡುತ್ತಿರುವ ದೂರು ನೀಡಿದ್ದು,
ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರ ಆದೇಶದ ಮೇರೆಗೆ ಉಪನಿರ್ದೇಶಕರು ಆಹಾರ ಇಲಾಖೆ ಇವರ ಮಾರ್ಗದರ್ಶನದಲ್ಲಿ ನಗರದ ವಿವಿಧ ಹೋಟೆಲ್/ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಈ ವೇಳೆ 12 ಗೃಹ ಬಳಕೆಯ ಅಡುಗೆ ಅನಿಲ( ಗ್ಯಾಸ್ ಸಿಲಿಂಡರ್) ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ತಾಲೂಕಿನ ಆಹಾರ ಶಿರಸ್ತೇದಾರ ಬಿ.ಆರ್.ವೆಂಕಣ್ಣ, ನಗರ ಆಹಾರ ನಿರೀಕ್ಷಕ ಮುನಿಭೂಪತಿ, ಪೋಲೀಸ್ ಅಧಿಕಾರಿಗಳು ಇದ್ದರು.

Megha News