ರಾಯಚೂರು. ಅನಧಿಕೃತವಾಗಿ ಐಪಿ ಸೆಟ್‌ಗಳಿಗೆ ಕಂಪನಿಯ 25 ಕಿ.ವ್ಯಾ ಸಾಮರ್ಥ್ಯದ ಪರಿವರ್ತ ಕಗಳು ಮತ್ತು ಸಾಮಗ್ರಿಗಳನ್ನು ಅಳವಡಿಸಿ ವಿ ದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣಕ್ಕೆ ಸಂಬಂ ಧಿಸಿದಂತೆ ಸಿರವಾರ ತಾಲೂಕಿನ ಕವಿತಾಳದ ಜೆಸ್ಕಾಂ ಶಾಖಾಧಿಕಾರಿ ಶಿವಪ್ಪ ಅವರನ್ನು ಸೇವೆ ಯಿಂದ ಅಮಾನತು ಮಾಡಿ ಜೆಸ್ಕಾಂ ಬಳ್ಳಾರಿ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ವೆಂಕಟೇಶಲು ಆದೇಶ ಹೊರಡಿಸಿದ್ದಾರೆ.
ಜೆಸ್ಕಾಂ ಶಾಖಾಧಿಕಾರಿ ಶಿವಪ್ಪ ಅವರು ಅನಧಿಕೃ ತವಾಗಿ ಐಪಿ ಸೆಟ್‌ಗಳಿಗೆ ಕಂಪನಿಯ 25 ಕಿ.ವಾ ಸಾಮರ್ಥ್ಯದ ಪರಿವರ್ತಕಗಳು ಮತ್ತು ಸಾಮಗ್ರಿ ಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನಿಗಮಕ್ಕೆ 5.38 ಲಕ್ಷ ರೂ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ.
ಈ ಕುರಿತು ಸಿರವಾರ ಸಹಾಯಕ ಕಾರ್ಯನಿರ್ವಾ ಹಕ ಎಂಜಿನಿಯರ್ ಬೆನ್ನಪ್ಪ ಅವರು ದೃಢೀಕರಿಸಿ ದ್ದು, ಜೆಸ್ಕಾಂ ಜಾಗೃತ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಜೆಸ್ಕಾಂ ಬಳ್ಳಾರಿ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ವೆಂಕಟೇಶಲು ಅಮಾನತು ಮಾಡಿ ಆದೇಶಿಸಿದ್ದಾರೆ.