ರಾಯಚೂರು. ತುಂಗಭದ್ರ ಎಡದಂಡೆ ಕಾಲುವೆಯಲ್ಲಿ ಅಕ್ರಮವಾಗಿ ನೀರು ಕಳ್ಳತನ ಮಾಡಿಕೊಳ್ಳುತ್ತಿವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಕೆಳ ಭಾಗಕ್ಕೆ ನೀರಿಸಲು ಸಮರ್ಪಕವಾಗಿ ಗೇಜ್ ನಿರ್ವಹಣೆಗೆ ಆಗ್ರಹಿಸಿ ಸಾತ್ ಮೈಲ್ ಹತ್ತಿರ ಮೈಲ್ 104ರ ಒಳಪಡುವ ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ತುಂಗಭದ್ರ ಎಡದಂಡೆ ಕಾಲುವೆಯಿಂದ ಹರಿಸಿದ ನೀರನ್ನು ಅಕ್ರಮವಾಗಿ ಬಳಕೆ ಮಾಡುತ್ತಿದ್ದು, ಎಲ್ಲಲ್ಲದೇ ನಡೆಯುತ್ತಿದೆ. ಈ ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೂ ಮತ್ತು ಈ ಭಾಗದ ಜನಪ್ರತಿನಿಧಿಗಳಗೂ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
2010ಕ್ಕಿಂತ ಮೊದಲು ಎಡದಂಡೆ ಕಾಲುವೆಗೆ 3300 ದಿಂದ 3400 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುತ್ತಿದ್ದರೂ, ಮೈಲ್ ಸಂಖ್ಯೆ 104ಕ್ಕೆ 6 ಅಡಿ ನೀರು ಬರುತ್ತಿತ್ತು. ಆದರೆ, ಈಗ 4100 ಕ್ಯೂಸೆಕ್ಸ್ ನೀರು ಬಿಟ್ಟರೂ ಮಾನ್ವಿ, ಸಿರವಾರ ಮತ್ತು ರಾಯಚೂರು ತಾಲೂಕಿಗೆ ನೀರು ತಲುಪುತ್ತಿಲ್ಲ. ಕಾರಣ, ಅನಧಿಕೃತವಾಗಿ ಮೇಲ್ಬಾಗದ ಕೆಲವು ರೈತರು ಅಕ್ರಮ ನೀರಾವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
2008 ರಿಂದ 2012ರ ವರೆಗೆ ಕಾಲುವೆ ದುರಸ್ಥಿ ಮತ್ತು ಆಧುನೀಕರಣಕ್ಕೆ ಸರ್ಕಾರ ಸುಮಾರು 10 ಸಾವಿರ ಕೋಟಿ ಹಣ ಖರ್ಚು ಮಾಡಿದೆ, ಯಾವು ದೇ ಪ್ರಯೋಜನೆಯಾಗಿಲ್ಲ, ಈ ಕುರಿತು ಸೆ.25 ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾ ಗಿದೆ. ಅದರೂ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂದು ಕಿಡಿ ಕಾರಿದರು.
ಅಕ್ರಮವಾಗಿ ನೀರು ಬಳಕೆಗೆ ಸಂಬಂಧಿಸಿದಂತೆ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಇವರು ತಮ್ಮ ಭಾಗದಲ್ಲಿ ಕಾಲುವೆಯ ನೀರನ್ನು ಅಕ್ರಮ ವಾಗಿ ಬಳಕೆಗೆ ಅನುಕೂಲ ಮಾಡಿಕೊಟ್ಟು, ಅಕ್ರಮ ಮ ನೀರು ಬಳಕೆ ಮಾಡಿಕೊಳ್ಳುತ್ತಿರುವ ಎಲ್ಲಾ ರೈತರಿಂದ ಒಂದು ಬೆಳೆಗೆ 2000 ಚೀಲ ಭತ್ತವನ್ನು ಹಫ್ತಾ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಓಟ್ ಬ್ಯಾಂಕ್ಗಾಗಿ ತಮ್ಮ ಭಾಗದ ರೈತರಿಗೆ ಸಹಾಯ ಮಾಡುವ ನೆಪದಲ್ಲಿ ಭತ್ತದ ಹಫ್ತಾ ವಸೂಲಿ ಮಾಡಿ, ಹಣ ಗಳಸುವ ಉದ್ದೇಶದಿಂದ ಜನಪ್ರತಿನಿಗಳೇ ಅಕ್ರಮ ನೀರು ಬಳಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಹೀಗಾದರೆ, ಕಾಲುವೆಯ ಕೆಳಬಾಗದ ರೈತರ ಗತಿಏನು ಎಂದು ಪ್ರಶ್ನೆ ಮಾಡಿದರು.
ಕೂಡಲೇ ಅಕ್ರಮ ನೀರು ಬಳಕೆ ಕುರಿತು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕು, ಅಕ್ರಮವಾಗಿ ಕಾಲುವೆಯ ನೀರು ಬಳಕೆ ಮಾಡಿಕೊಳ್ಳುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಕೆಳಭಾಗದ ಮಾನ್ವಿ, ಸಿರವಾರ ಮತ್ತು ರಾಯಚೂರು ತಾಲೂಕುಗಳ ಎಲ್ಲಾ ರೈತರಿಗೂ ನಿಗದಿತ ಪ್ರಮಾಣದಲ್ಲಿ ಗೇಜ್ ನಿರ್ವಹಣೆ ಮಾಡಬೇಕು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.