ರಾಯಚೂರು. ಸಂಭ್ರಮದಿಂದ ಆಚರಿಸಲ್ಪಡುವ ಬೆಳಕಿನ ಹಬ್ಬ ದೀಪಾವಳಿ ರೈತಾಪಿ ವರ್ಗಕ್ಕೆ ಸಂಬ್ರಮವಿಲ್ಲದಂತಾಗಿದೆ, ಒಂದಡೆ ಬರಗಾಲ ಮತ್ತೊಂದೆಡೆ ಬೆಲೆ ಏರಿಕೆ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯ ಈ ಬಾರಿ ಸಂಭ್ರಮ ಕಳೆಗುಂದಿಲ್ಲ.
ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತವಾಗಿ ಮಳೆ ಯಾಗದೇ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆ ನಷ್ಟ ಉಂಟಾಗಿದೆ, ಸಾಲ ಮಾಡಿ ರೈತರು ಬೆಳೆ ಬೆಳೆದಿದ್ದು, ನಷ್ಟ ಅನುಭವಿಸಿರುವುದರಿಂದ ದೀಪಾವಳಿ ಬೆಳಕಿನ ಹಬ್ಬ ರೈತರ ಪಾಲಿಗೆ ಕತ್ತಲೆಯ ಹಬ್ಬವಾಗಿದೆ.
ದೀಪಾವಳಿ ಸಮಯವೆಂದರೆ ರೈತರಿಗೆ ಇನ್ನಿಲ್ಲದ ಹಿಗ್ಗು. ಕಷ್ಟಪಟ್ಟು ಬಿತ್ತನೆ ಮಾಡಿ ಬೆಳೆದ ಬೆಳೆಗಳ ಲಾಭ ಕೈಗೆ ಸಿಗುವಂತ ದಿನಗಳಾಗಿತ್ತು.
ರೈತರಿಗೆ ಫಸಲು ಕೈಸೇರಿದರೆ, ವರ್ತಕರು, ಉತ್ತ ಮ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿರುತ್ತಿದ್ದ ರು, ಆದರೆ ಈ ಬಾರಿ ಬರಗಾಲ ಹಿನ್ನೆಲೆಯಲ್ಲಿ ವಹಿವಾಟು ಸಹ ಕೈಕೊಟ್ಟಿದೆ,
ಮಳೆ ಇಲ್ಲವಾದರೆ ದೀಪಾವಳಿ ಆಚರಣೆಗೆ ಖುಷಿಯೇ ಇರುವುದಿಲ್ಲ. ಮಳೆಯಾಧಾರಿತ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಈ ಸಲ ನಿರೀಕ್ಷಿತ ಮಳೆ ಬಿದ್ದಿಲ್ಲ. ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ.
ಹಬ್ಬದ ಪೂಜೆಗೆ ಬೇಕಾದ ವಿವಿಧ ಬಗೆಯ ಹಣ್ಣು, ಹೂವಿನ ಹಾರ, ಚೆಂಡು ಹೂವು, ಕಬ್ಬು, ಬಾಳೆ ದಿಂಡು, ಮಾವಿನ ಎಲೆ ಸೇರಿ ಇತರೆ ಸಾಮಗ್ರಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಖರೀದಿಗೆ ಜನರ ನಿರಾಸಕ್ತಿ ಕಂಡು ಬಂತು, ದೀಪಗಳು, ಅಲಂಕಾ ರಿಕ ಆಕಾಶ ಪುಟ್ಟಿಗಳು ಗಮನ ಸೆಳೆಯುತ್ತಲಿವೆ.
ಬೆಲೆ ಏರಿಕೆ, ಬರಗಾಲದ ನಡುವೆ ದೀಪಾವಳಿ ಯನ್ನು ಆಚರಿಸಬೇಕಾದ ಅನಿವಾರ್ಯತೆ ಇದ್ದು
ಬೆಲೆ ಏರಿಕೆ ಇದ್ದರೂ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಅಲ್ಲಲ್ಲಿ ಕಂಡು ಬಂತು ಒಟ್ಟಾರೆಯಾಗಿ ಬರ, ಬೆಲೆ ಏರಿಕೆ ಹಿನ್ನೆಲೆ ದೀಪಾವಳಿ ರೈತಾಪಿ ವರ್ಗಕ್ಕೆ ಬೆಳಕಿನ ಹಬ್ಬವಾಗಿಲ್ಲ.