Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಕ್ರಿಯಾಯೋಜನೆ ಕಳುಹಿಸದೇ ನಿರ್ಲಕ್ಷ್ಯ ಅಧಿಕಾರಿ ವಿರುದ್ಧ ಗುಡುಗಿದ ಸಂಸದರು

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಕ್ರಿಯಾಯೋಜನೆ ಕಳುಹಿಸದೇ ನಿರ್ಲಕ್ಷ್ಯ ಅಧಿಕಾರಿ ವಿರುದ್ಧ ಗುಡುಗಿದ ಸಂಸದರು

ರಾಯಚೂರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಜಿಲ್ಲೆಯಿಂದ ಈ ವರೆಗೆ ಕ್ರಿಯಾ ಯೋಜನೆ ಕಳುಹಿದೇ ನಿರ್ಲಕ್ಷ್ಯ ವಹಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಆರ್ ವಿರುದ್ಧ ಸಂಸದರು ಕಿಡಿ ಕಾರಿದರು‌.

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ದಿಶಾ ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ವರದಿ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಆರ್. ಅವರು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಜಿಲ್ಲೆಯಿಂದ ಕೇಂದ್ರಕ್ಕೆ ಕ್ರಿಯಾ ಯೋಜನೆ ಸಲ್ಲಿಸಬೇಕು, ಆದರೆ ಕಳುಹಿಸದೇ ನಿರ್ಲಕ್ಷ್ಯ ವಹಿಸಿ ಅಧಿಕಾರಿ ವಿರುದ್ಧ ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಿಡಿ ಕಾರಿದರು‌.
ಹಸಿರು ಬರವೆಂದು ಗೋಷಣೆ ಮಾಡಿದೆ, ಬರ ಸಮಿಕ್ಷೆ ಎರಡೆರಡು ಬಾರಿ ಮಾಡಬೇಕು ಎಂದು ಹೇಳಿದ್ದು, ಈ ಹಿಂದೆಯೇ ಯಾಕೆ ಮಾಡಿಲ್ಲವೆಂದರು.
ಜಿಲ್ಲೆಯಲ್ಲಿ ಬರಗಾಲ ಹಿನ್ನೆಲೆಯಲ್ಲಿ ವೀಕ್ಷಣೆ ಮಾಡಿದ್ದು ಎಲ್ಲೆಡೆ ತೀವ್ರ ಬರ ಇದೆ, ಹತ್ತಿ ಬೆಳೆ ಮೂರು ಅಡಿಯಿಂದ ಮೇಲೆದಿದ್ದಲ್ಲ, ಭತ್ತ ಸಹಾ ಅಕಾಲಿಕ ಮಳೆಯಿಂದ ನಾಶವಾಗಿದೆ, ಜಿಲ್ಲೆಯಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡಿದಂತಿದೆ ಎಂದು ಗುಡುಗಿದರು.
ಕ್ರಿಯಾ ಯೋಜನೆ ಕಳುಹಿಸುವಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ವಿರುದ್ಧ ಕೆಲಸ ಮಾಡುತ್ತಿಲ್ಲವೆಂದು ಅನುಪಾಲನಾ ವರದಿಯಲ್ಲಿ ನಮೂದಿಸಲು ಸೂಚಿಸಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಡೆ ಬರ ಇದೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡಲಾಗಿದೆ, ಸಾಕಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ, ಈ ಬಗ್ಗೆ ಕೃಷಿ ಇಲಾಖೆ ನಿರ್ಲಕ್ಷ್ಯ ತಾಳಿದೆ, ಒಂದು ಕಡೆ ಬರ ಮತ್ತೊಂದು ಕಡೆ ಟಿಎಲ್‌ಬಿಸಿ ನೀರಿಗಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ, ಈ ಬಗ್ಗೆ ಗಂಭಿರವಿಲ್ಲದೆ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ತೋಟಗಾರಿಕೆ ಇಲಾಖೆಯಿಂದ ಈವರೆಗೆ ತಾಲೂಕು ವಾರು ಬರ ಸಮೀಕ್ಷೆ ನಡೆಸಿಲ್ಲ, ಕೇಲವ ಕಾಟಾಚಾರಕ್ಕೆ ಬಿತ್ತನೆ ಗುರಿ ಹೇಳಿದರೆ ಸಾಲದು ಎಲ್ಲೆ ಎಷ್ಟು ಹಾನಿಯಾಗಿದೆ ಎಂದು ಮಾಹಿತಿ ಕೊಡಬೇಕು ಎಂದರು.
ಕಳೆದ ವರ್ಷದ ಗುರಿ ಸಾಧಿಸಿದೆ ಈ ವರ್ಷ ಗುರಿ ಎಲ್ಲಿ ಮಾಡಿದ್ದೀರೀ ಈ ವರ್ಷದಲ್ಲಿ ಕೃಷಿ ಸಂಚಾಯಿ ಯೋಜನೆಗೆ ಎಷ್ಟು ಅರ್ಜಿ ಗಳು ಬಂದಿದ್ದು, ಎಷಯ ಪರಿಶೀಲನೆ ಮಾಡಿದೆ, ಎಷ್ಟು ರೈತರು ಯೋಜನೆ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಉತ್ತರ ನೀಡಿದೇ ತೋಟಗಾರಿಕೆ ಇಲಾಖೆ ಅಧಿಕಾರಿ ಚಡಪಡಿಸಿದರು‌.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪೂರ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Megha News