ರಾಯಚೂರು,ನಗರದ ಕಾಟೆದರವಾಜ್ಬಳಿಯ ಹಜರತ್ ಅಲ್ಲಾವುದ್ದೀನ್ ಬಾಬಾ ದರ್ಗಾದ ಬಳಿ ನಿರ್ಮಾಣ ಮಾಡುತ್ತಿರುವ ದ್ವಾರ ನಿರ್ಮಾಣ ಮಾಡುವದನ್ನು ವಿರೋಧಿಸಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದಾಗ ಎರಡು ಗುಂಪುಗಳ ಮಧ್ಯೆ ವಾಗ್ವಾದ ನೂಕು ನುಗ್ಗಲು ನಡೆದಿದೆ.
ಕನಕದಾಸ ಜಯಂತಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ತೆರಳುತ್ತಿದ್ದಾಗ ಸೂಪರ್ ಮಾರ್ಕೆಟ್ಗೆ ಆಗಮಿಸಿದರು. ಪೂರ್ವಭಾವಿಯಾಗಿ ಅನೇಕ ಯುವಕರು ದರ್ಗಾ ಬಳಿ ಜಮಾವಣೆ ಗೊಂಡಿದ್ದರು. ಎರಡು ಗುಂಪುಗಳ ಮಧ್ಯೆ ಪರ ವಿರೋಧ ಘೋಷಣೆಗಳ ಕೇಳಿಬಂದವು. ಪೊಲೀಸರು ಎರಡು ಗುಂಪುಗಳನ್ನು ತಹಬಂದಿಗೆ ತರಲು ಹರಸಾಹಸ ಪಡೆಬೇಕಾಯಿತು.
ನಗರಸಭೆ ಅನುದಾನದಲ್ಲಿ ಕಮಾನ್ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭವಾಗಿದ್ದು ಸಾರ್ವಜನಿಕರ ಸಂಚಾರ ಇರುವ ರಸ್ತೆಯನ್ನು ಬಂದ್ ಮಾಡಿ ಕಮಾನ್ ನಿರ್ಮಾಣ ಮಾಡಲು ಬಿಜೆಪಿ ಮುಖಂಡರು ವಿರೋಧಿಸಿದರು. ನಗರದ ಜನಸಂದಣಿ ಸ್ಥಳದಲ್ಲಿ ಕಮಾನ್ ನಿರ್ಮಿಸಿದರೆ ಸಂಚಾರಕ್ಕೆ ತೊಂದರೆಯಾಗುವದಲ್ಲದೇ ರಸ್ತೆಯೇ ಇಲ್ಲದಂತಾಗುತ್ತದೆ ಎಂದು ಆರೋಪಿಸಿದರು. ನಗರಸಭೆ ಸಭೆಯ ನಿರ್ಣಯದಂತೆ ೧೫ಲಕ್ಷ ರೂ ವೆಚ್ಚದ ಅನುದಾನದಲ್ಲಿ ಕಮಾನ್ ನಿರ್ಮಾಣ ಮಾಡಲು ನಗರಸಭೆ ಸಾಮಾನ್ಯಸಭೆ ಅನುಮೋದಿಸಿದೆ. ಕಮಾನ್ ನಿರ್ಮಾಣಕ್ಕೆನಗರಸಭೆಯೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ್ದು ಈಗ ವಿರೋಧ ವ್ಯಕ್ತಪಡಿಸುತ್ತಿರುವ ವಿರುದ್ದ ಮುಸ್ಲಿಂ ಸಮೂದಾಯ ಯುವಕರು ಸಹ ಆಕ್ಷೇಪ ವ್ಯಕ್ತಪಡಿಸಿದರು. ಪರ ವಿರೋಧದ ಮಧ್ಯೆ ಬಿಗು ವಾತಾವರಣ ನಿರ್ಮಾಣವಾಯಿತು. ಪೊಲೀಸರು ಎರಡು ಗುಂಪುಗಳನ್ನು ಸವiಜಾಯಿಷಿ ಕಳುಹಿಸಿದರು. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ.
Megha News > Local News > ನಗರದ ಕಾಟೆದರವಾಜ್ ಬಳಿ ಹಜರತ್ ಅಲ್ಲಾವುದ್ದೀನ್ ಬಾಬಾ ದರ್ಗಾ ಕಮಾನ್ ನಿರ್ಮಾಣ ವಿವಾದ; ಎರಡು ಗುಂಪುಗಳ ಘೋಷಣೆ – ಬಿಗು ವಾತಾವರಣ
ನಗರದ ಕಾಟೆದರವಾಜ್ ಬಳಿ ಹಜರತ್ ಅಲ್ಲಾವುದ್ದೀನ್ ಬಾಬಾ ದರ್ಗಾ ಕಮಾನ್ ನಿರ್ಮಾಣ ವಿವಾದ; ಎರಡು ಗುಂಪುಗಳ ಘೋಷಣೆ – ಬಿಗು ವಾತಾವರಣ
Tayappa - Raichur30/11/2023
posted on
Leave a reply