ರಾಯಚೂರು. ಸಿಸಿ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದು, ದುರ್ವಾಸನೆಯ ಮಧ್ಯ ಜನರು ಚರಂಡಿ ನೀರಿನಲ್ಲಿ ತಿರುಗಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಮನ್ಸಲಾಪೂರ ಗ್ರಾಮದಲ್ಲಿನ ವಾಲ್ಮಿಕಿ ವೃತ್ತದಿಂದ ಬಾಬು ಜನಜೀವನರಾಮ್ ವೃತ್ತಕ್ಕೆ ಹೋಗುವ ರಸ್ತೆಯಾಗಿದ್ದು, ಮುಖ್ಯ ರಸ್ತೆಯಾಗಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ನಿತ್ಯ ಜನರು ಗೋಳಾಡುತ್ತಿದ್ದಾರೆ.
ಕಳೆದ ಎಳೆಂಟು ವರ್ಷಗಳ ಹಿಂದೆ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ, ಆದರೆ ಚರಂಡಿ ಕಾಲುವೆ ನಿರ್ಮಾಣ ಮಾಡದೇ ಇರುವುದರಿಂದ ಮನೆಗಳಿಂದ ಬಳಸಿದ ನೀರು ಸಿಸಿ ರಸ್ತೆಯ ಮೇಲೆ ನಿಂತಿವೆ, ಮುಂದೆ ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ, ಪ್ರತಿದಿನ ನೀರು ಚರಂಡಿ ನೀರು ಹೆಚ್ಚುತ್ತಿದೆ, ಈ ಬಗ್ಗೆ ಗನಮ ಹರಿಸಿ ಕ್ರಮ ವಹಿಸಬೇಕಾದ ಪಿಡಿಒ ಅನ್ನಪೂರ್ಣ ಅವರು ನಿರ್ಮಕ್ಷ್ಯ ವಹಿಸಿದ್ದಾರೆ, ಕೇವಲ ಗ್ರಾಪಂ ಕಚೇರಿಗೆ ಬಂದು ಹೋಗುತ್ತಿ ದ್ದಾರೆ, ಹೊರತು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಗ್ರಾಮ ಪಂಚಾಯತಿ ಸದಸ್ಯರು ಆಟಕುಂಟು ಲೆಕ್ಕಕ್ಕಿಲ್ಲದಂತೆ ಇದ್ದಾರೆ, ನಿತ್ಯ ಸದಸ್ಯರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ, ಕ್ಯಾರೆ ಎನ್ನುತಿಲ್ಲ,
ಗ್ರಾಮದಲ್ಲಿ ಬಹುತೇಕ ಕಡೆ ಸಿಸಿ ರಸ್ತೆ ನಿರ್ಮಾಣ ಮಾಡಿದ್ದಾರೆ ಆದರೆ ಯಾವುದೇ ಸಿಸಿ ರಸ್ತೆ ಚರಂಡಿ ನಿರ್ಮಾಣ ಮಾಡಿಲ್ಲ, ಚರಂಡಿ ಕಾಲುವೆ ನಿರ್ಮಾಣ ಮಾಡದೆ ಸಿಸಿ ರಸ್ತೆ ಮಾಡಿದ್ದರಿಂದ ಮನೆಗಳ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ.
ಗ್ರಾಮದಲ್ಲಿ ಕಳೆದ ನಾಲ್ಲೈದು ವರ್ಷಗಳ ಹಿಂದೆ ಡೆಂಗ್ಯೂನಿಂದ ಬಾಲಕಿ ಮೃತಪಟ್ಟದ್ದರು, ಇದೀಗ ಮತ್ತೆ ಡೆಂಗ್ಯೂ ಆತಂಕ ಎದುರಾಗಿದೆ, ಚರಂಡಿ ಕಾಲುವೆಯಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಹಂದಿಗಳ ವಾಸಸ್ಥಾನಾಗಿದೆ. ಈ ರಸ್ತೆಯ ಮೂಲಕ ಪ್ರತಿ ಶನಿವಾರ ಮತ್ತು ಅಮವಾಸ್ಯೆಗೆ ಹೂವಿನ ಆಂಜನೇಯ ದೇವಸ್ಥಾನಕ್ಕೆ ಭಕ್ತರು ತೆರಳುತ್ತಾರೆ, ರಾಯಚೂರು ಸೇರಿದಂತೆ ಬಹುತೇಕ ಕಡೆ ಭಕ್ತರು ಇದೇ ಮಾರ್ಗದಲ್ಲಿ ಹೋಗಬೇಕು, ಜನರು ಈ ರಸ್ತೆಯನ್ನು ನೋಡಿ ಶಾಪ ಹಾಕುತ್ತಿದ್ದಾರೆ, ನಗರವೇ ಉತ್ತಮ ಗ್ರಾಮೀಣ ಪ್ರದೇಶದ ಅದಕ್ಕಿಂತ ಹೊಲಸು ಎಂದು ಹೇಳಿಕೊ ಳ್ಳುತ್ತಿದ್ದಾರೆ.
ಈ ರಸ್ತೆಯಲ್ಲಿ ಶಾಲೆಯ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳು ತೆರಳುತ್ತಿದ್ದಾರೆ, ಇದರಿಂದ ರೋಗ ಹರಡುವ ಸಾಧ್ಯತೆ ಇದೆ,
ಸಾಕಷ್ಟು ಮಕ್ಕಳಿಗೆ ಜ್ವರದ ಲಕ್ಷಣಗಳು ಕಾಸಿಕೊಳ್ಳುತ್ತಿದೆ, ಇದೀಗ ಡೆಂಗ್ಯೂ ಮಲೇರಿಯಾ, ರೋಗ ಹೆಚ್ಚಾಗಿದ್ದು, ಜೊತೆಗೆ ಚೀನಾ ದೇಶದ ರೋಗ ನ್ಯುಮೋನಿಯಾ ಬೀತಿ ಎದುರಾಗಿದೆ, ಗ್ರಾಪಂ ಪಿಡಿಒ ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ವಗಿಸಿದ್ದಾರೆ,
ಈ ಕುರಿತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಿಇಒ ಅವರು ಗಮನ ಹರಿಸಿ ಕ್ರಮ ವಹಿಸಬೇಕಿದೆ.
* ಸಿಸಿ ರಸ್ತೆ ಮೇಲೆ ಚರಂಡಿ ನೀರು ನಿಲ್ಲುತ್ತಿದ್ದು, ಸಾಕಷ್ಟು ಬಾರಿ ಪಿಡಿಒ ಗಮನಕ್ಕೆ ತಂದಿದೆ, ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ಶಾಲಾ ಮಕ್ಕಳು ಚರಂಡಿ ನೀರಿನಲ್ಲಿ ಹೋಗುತ್ತಿದ್ದಾರೆ, ಡೆಂಗ್ಯೂ ಮಲೇರಿಯಾ ರೋಗಕ್ಕೆ ದಾರಿ ಮಾಡಿಕೊಡುತ್ತಿ ದ್ದಾರೆ, ಈ ಬಗ್ಗೆ ಕ್ರಮ ವಹಿಸಬೇಕು
* ರಾಘವೇಂದ್ರ ಬೋರಡ್ಡಿ
ಗ್ರಾಪಂ ಮಾಜಿ ಸದಸ್ಯ