ರಾಯಚೂರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಆಸ್ಥಾ ಫೌಂಡೇಶನ್, ಮೀರತ್ ರವರ ಸಹಯೋಗದಲ್ಲಿ ಡಿ.೧೮ ರಿಂದ ಡಿ.೨೦ ರವೆರೆ ೮ನೇ ಅಂತರಾಷ್ಟಿçÃಯ ಜಾಗತಿಕ ಸುಸ್ಥಿರ ಕೃಷಿ ಮತ್ತು ಕೃಷಿ ಸಂಬಧಿತ ಸಂಶೋಧನಾ ಉಪಕ್ರಮಗಳ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳು ತಿಳಿಸಿದ್ದಾರೆ.
ಡಿ.೧೮ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಸಮ್ಮೇಳನದ ಉದ್ಘಾಟನೆಯನ್ನು
ಡಾ. ಆರ್. ಸಿ. ಜಗದೀಶ, ಕುಲಪತಿಗಳು ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ರವರು ನೆರವೇರಿಸುವರು, ಅಧ್ಯಕ್ಷತೆಯನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ಹನುಮಂತಪ್ಪ ರವರು ವಹಿಸುವರು, ಮುಖ್ಯ ಅತಿಥಿಗಳಾಗಿ ಡಾ. ಬಿ.ವಿ.ಪಾಟೀಲ, ವಿಶ್ರಾಂತ ಕುಲಪತಿಗಳು, ಕೃ.ವಿ.ವಿ., ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ಎ. ಚಂದ್ರಣ್ಣ, ಕೊಪ್ಪಳದ ಜಲಚರ ಸಾಕಣೆ ಅಧ್ಯಕ್ಷರು ಡಾ. ದಿಲೀಪ್ ಕುಮಾರ್ ಝಾ, ನೇಪಾಳ ಹಾಗೂ ಬಾಂಗ್ಲಾದೇಶ ಅಂತರಾಷ್ಟಿçÃಯ ಸಲಹೆಗಾರರು ಡಾ. ಬಿ. ಕೆ. ಚಕ್ರವರ್ತಿ ರವರು ಭಾಗವಹಿಸುವರು.
ಮೂರು ದಿನಗಳವರೆಗೆ ಆಯೋಜಿಸಿರುವ ಈ ಸಮ್ಮೇಳನದಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಇಂಡೋನೇಷಿಯಾ ಹಾಗೂ ಮತ್ತಿತರ ದೇಶಗಳ ಸುಮಾರು ೨೦೦ ಕೃಷಿ ವಿಜ್ಞಾನಿಗಳು ಭಾಗವಹಿಸಿ ಜಾಗತಿಕ ವಲಯದಲ್ಲಿನ ಸುಸ್ಥಿರ ಕೃಷಿ ಮತ್ತು ಕೃಷಿ ಸಂಬAಧಿತ ಸಂಶೋಧನಾ ಉಪಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸುವರು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Megha News > Local News > ಡಿ.೧೮ ರಿಂದ ೨೦ರವರೆಗೆ ಕೃಷಿ ವಿವಿಯಲ್ಲಿ ೮ನೇ ಅಂತರಾಷ್ಟಿçÃಯ ಸಮ್ಮೇಳನ
ಡಿ.೧೮ ರಿಂದ ೨೦ರವರೆಗೆ ಕೃಷಿ ವಿವಿಯಲ್ಲಿ ೮ನೇ ಅಂತರಾಷ್ಟಿçÃಯ ಸಮ್ಮೇಳನ
Tayappa - Raichur16/12/2023
posted on
Leave a reply