ರಾಯಚೂರು. ವಿವಾಹವೆಂಸರೆ ಅಬ್ಬರ ಆಡಂಬರ ಇದ್ದೇ ಇರುತ್ತೆ, ಆದರೆ ಇದಕ್ಕೆ ತದ್ವಿರುದ್ಧವಾಗಿ ಅದರಲ್ಲೂ ವರ ವಧು ಇಬ್ಬರೂ ಸರ್ಕಾರಿ ನೌಕರರಾಗಿದ್ದು ಯಾವುದೇ ಆಡಂಬರ ವಿಲ್ಲದೆ ರಾಷ್ಟ್ರಕವಿ ಕುವೆಂಪು ಅವರ ಆದರ್ಶ ವಿವಾಹ ಕಲ್ಪನೆಯಾಗಿರುವ ಮಂತ್ರ ಮಾಂಗಲ್ಯ ಪದ್ಧತಿಯಂತೆ ಸರಳ ವಿವಾಹವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೇವದುರ್ಗ ತಾಲೂಕಿನ ಯರಮರಸ್ ಗ್ರಾಮದ
ವರ ಗೌರಿ ಶಂಕರ ಜಿ. ಇವರು ಕಲಬುರಗಿ ಜಿಲ್ಲೆಯ ಸೇಡಂ ವಲಯದ ಅಬಕಾರಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ,
ದೇವದುರ್ಗ ತಾಲೂಕಿನ ಯರಮರಸ್ ಗ್ರಾಮದ ವಧು ಶಿಲ್ಪಾ.ಎಸ್ ಇವರು ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ, ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರೂ ಯಾವುದೇ ಆಡಂಬರವಿಲ್ಲದೆ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಇವರ ವಿವಾಹ ಸರಳವಾಗಿದ್ದರೂ ಹಲವು ವಿಶೇಷತೆಯನ್ನು ಹೊಂದಿದೆ, ಈ ಮದುವೆ ಸಮಾರಂಭದಲ್ಲಿ ಸಾಮಾಜಿಕ ಚಿಂತಕ ವಿವೇಕಾನಂದ.ಎಚ್.ಕೆ ಅವರು ವಿವಾಹ ನೀತಿ ಸಂಹಿತೆಯನ್ನು ಬೋಧಿಸಿದರೆ, ಗಮಕ ಕಲಾವಿದ ವಿದ್ವಾನ್ ಖಾಸಿಂ ಮಲ್ಲಿಗೆ ಮಡುವು ಅವರು ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕಾವ್ಯ ಗಾಯನ ಹಾಡಿದರು.
ಆಹಾರ ಸಂರಕ್ಷಣೆ ನೇತಾರ ಯುವರಾಜ್.ಎಂ ಇವರು ವಿವಾಹ ಸಮಾರಂಭವನ್ನು ನಿರೂಪಿ ಸಿದರು. ಎಚ್.ಸಿ.ಉಮೇಶ್ ನಾಡಗೀತೆ ಹಾಡಿದರು. ವಧು-ವರರ ಕುಟುಂಬಗಳ ಸಂಬಂಧಿಗಳು, ಆಪ್ತರು-ಸ್ನೇಹಿತರು, ಈ ಸರಳ ವಿವಾಹಕ್ಕೆ ಸಾಕ್ಷಿಯಾದರು.