ಸಿಂಧನೂರು. ನಗರದಲ್ಲಿ ಹುಚ್ಚು ನಾಯಿ ದಾಳಿಯಿಂದಾಗಿ ಬೇಸತ್ತು ಹೋಗಿದ್ದು ಜನರು ಹುಚ್ಚು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ, ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.
ನಗರದ ಮಾರುಕಟ್ಟೆಗೆ ಹೋಗುತ್ತಿರುವ ವ್ಯಕ್ತಿ ಮೇಲೆ ದಾಳಿ ಮಾಡಿದೆ, ಕಚ್ಚಿ ಗಾಯಗೊಳಿಸಿದೆ,
ಬಿಡಿಸಲು ಹೋದಾಗಲು ನಾಯಿ ಬಿಟ್ಟಿಲ್ಲ.
ಕಳೆದ ಎರಡು ದಿನಗಳ ಹಿಂದೆ ಅಕ್ಕಮಹಾದೇವಿ ಆಸ್ಪತ್ರೆಗೆ ಪೊಲೀಸ್ ಕಾನ್ ಸ್ಟೇಬಲ್ ಪತ್ನಿ ಪುತ್ರನನ್ನು ಆರೋಗ್ಯ ಪರೀಕ್ಷೆಗೆ ಕರೆದೊ ಯ್ದಿದ್ದರು. ಆಗಲೂ ಪುತ್ರನಿಗೆ ಬೆನ್ನು ಬಿದ್ದ ಕಚ್ಚಿದ ನಾಯಿ ಬಿಡಿಸಲು ಹೋದ ಪೊಲೀಸ್ ಪೇದೆ ಪತ್ನಿಯೂ ಕೂಡ ನಾಯಿ ಕಡಿತಕ್ಕೆ ಗುರಿಯಾಗಿ, ಆಸ್ಪತ್ರೆಗೆ ದಾಖಲಾಗಿದ್ದರು.
ಲಹುಚ್ಚು ನಾಯಿಗಳ ದಾಳಿಯಿಂದ ಜನರುಭಯದ ವಾತಾವರಣ ಸೃಷ್ಟಿಸಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಹುಚ್ಚು ನಾಯಿ ಹಾವಳಿ ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.