ರಾಯಚೂರು.ಮರಕ ಸಂಕ್ರಾಂತಿ ಇನ್ನೂ ವಾರದೊಳಗೆ ಆಗಮಿಸಲಿದ್ದು ಈ ಮಧ್ಯೆಯೇ ಕೃಷ್ಣ ಸೇತುವೆ ದುರಸ್ತಿ ಹೆಸರಿನಲ್ಲಿ ಜ.೧೦ ರಿಂದ ಸಂಚಾರ ನಿಷೇಧಕ್ಕೆ ಪೊಲೀಸ್ ಇಲಾಖೆ ನಿರ್ಧರಿಸಿರುವ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಶಕ್ತಿನಗರದ ಬಳಿಯಿರುವ ಕೃಷ್ಣ ಸೇತುವೆ ಶಿಥಿಲಗೊಂಡು ವರ್ಷಗಳೇ ಉರುಳುತ್ತಿವೆ. ನಿತ್ಯವೂ ಸಂಚಾರ ಪರತಪಿಸಿಬೇಕಾದ ಸ್ಥಿತಿಯಿದೆ. ಆದರೆ ಸಂಕ್ರಾಂತಿ ಅಂಗವಾಗಿ ಪುಣ್ಯ ಸ್ನಾನ ಮಾಡಲು ಆಗಮಿಸುತ್ತಿರುವಾಗಲೇ ಪೊಲೀಸ್ ಇಲಾಖೆ ಸಂಚಾರ ನಿಷೇಧಕ್ಕೆ ತೀರ್ಮಾನಿಸಿದೆ. ಜಿಲ್ಲೆ ಸೇರಿದಂತೆ ಯಾದಗಿರಿ, ತೆಲಂಗಾಣ ಸೇರಿದಂತೆ ಅನೇಕ ಊರುಗಳಿಂದ ಭಕ್ತರು ಕೃಷ್ಣ ಸ್ನಾನಕ್ಕೆ ಆಗಮಿಸುತ್ತಿರುವದು ಪ್ರತಿವರ್ಷದಿಂದ ನಡೆದು ಕೊಂಡು ಬರುತ್ತಿದೆ. ಐದಾರು ದಿನ ಅವಕಾಶ ನೀಡಿದರೆ ಸಾರ್ವಜನಿಕರು ಅನುಕೂಲವಾಗುತ್ತಿತ್ತು. ಏಕಾಎಕಿ ಸಂಚಾರ ನಿಷೇಧ ತೀರ್ಮಾನ ಜನರಲ್ಲಿ ಬೇಸರಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೃಷ್ಣ ಸೇತುವೆ ದುರಸ್ತಿ ವಿಷಯದಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಅಂತರಾಜ್ಯ ಸಂಪರ್ಕಿಸುವ ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ೪೫ ದಿನ ಸಂಚಾರ ಸ್ಥಗಿತಗೊಳಿಸುವ ಮುಂಚೆ ಪೊಲೀಸ ಇಲಾಖೆ ಯೋಚಿಸದೇ ನಿರ್ಧರಿಸಿದೆ. ಸಂಕ್ರಾಂತಿ ಸ್ನಾನಕ್ಕೆ ಅವಕಾಶ ನೀಡಿ ನಂತರ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬಹುದಿತ್ತು. ಭಾರಿ ವಾಹನಗಳು ನಿತ್ಯವೂ ಇದೇ ಶಿಥಿಲ ಸೇತುವೆ ರಸ್ತೆಯ ಮೇಲೆ ಸಂಚರಿಸುತ್ತಿವೆ. ಆದರೆ ಏಕಾಎಕಿ ಪೊಲೀಸ್ ಇಲಾಖೆ ಸಂಚಾರ ಸ್ಥಗಿತಗೊಳಿಸುತ್ತಿರುವದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾದಂತಾಗಿದೆ. ಅಲ್ಲದೇ ಸಂಕ್ರಾಂತಿ ದಿನದಂದಂತೆ ಅನೇಕ ಜಾತ್ರೆಗಳು, ಪುಣ್ಯಸ್ನಾನ, ದೇವಸ್ಥಾನಗಳಿಗೆ ಭಕ್ತರು ತೆರಳುವದು ಸಹಜ.
೨೦೧೬ ರಿಂದಲೂ ಕೃಷ್ಣ ಸೇತುವೆ ದುರಸ್ತಿ ಹೆಸರನಲ್ಲಿ ಸಂಚಾರ ಸ್ಥಗಿತಗೊಳಿಸಲಾಗುತ್ತಲೇ ಬರಲಾಗುತ್ತಿದೆ. ದುರಸ್ತಿ ಕಾಮಗಾರಿ ಸಕಾಲದಲ್ಲಿ ನಡೆದಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ೧೬೭ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೃಷ್ಣ ಸೇತುವೆ ಸಂಚಾರ ಸ್ಥಗಿತಗೊಳ್ಳುವದರಿಂದ ತೆಲಂಗಾಣ ಮತ್ತು ಕರ್ನಾಟಕ ಪ್ರಯಾಣಿಕರು ಸುತ್ತುವರೆದು ಸಂಚಾರಿಸಬೇಕಾಗುತ್ತದೆ. ಆದರೆ ನಿಗಧಿ ೪೫ ದಿನಗಳ ದುರಸ್ತಿ ಕಾರ್ಯವನ್ನು ಸಂಕ್ರಾಂತಿ ನಂತರ ಕೈಗೆತ್ತಿಕೊಳ್ಳಬಹುದು. ಇಷ್ಟು ವರ್ಷ ಇಲ್ಲದೇ ಇರುವ ಆತಂಕವನ್ನು ಸಂಕ್ರಾಂತಿ ಆಚರಿಸುವ ಮುನ್ನವೇ ತೆಗೆದುಕೊಂಡಿರುವದು ಅನೇಕರ ಅಸಮಧಾನಕ್ಕೆ ಕಾರಣವಾಗಿದೆ. ಅಂತರಾಜ್ಯ ಪೊಲೀಸರೊಂದಿಗೆ ನಡೆದಿರುವ ಸಭೆಯಲ್ಲಿ ಜ.೧೦ ರಿಂದ ಸಂಚಾರ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ನಿರ್ಧಾರ ಮರು ಪರಿಶೀಲಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.