ರಾಯಚೂರು. ರಾಯಚೂರು ತಹಶೀಲ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮಹ್ಮದ್ ಹಯಾತ್ ಖತೀಬ್, ತಹಸೀಲ್ ಕಾರ್ಯಾಲಯ ರಾಯಚೂರು ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅನಧಿಕೃತ ಗೈರು ಹಾಜರಾಗಿರುವ ಆರೋಪದ ಬಗ್ಗೆ ವಿಚಾರಣೆ ನಡೆಸಲು ಈ ಕಾರ್ಯಾಲಯದಿಂದ ದಿನಾಂಕ:-೩೦-೦೮-೨೦೨೩, ೨೦-೦೯-೨೦೨೩, ೧೫-೧೧-೨೦೨೩, ೨೪-೧೧-೨೦೨೩ ಹಾಗೂ ೧೨-೧೨-೨೦೨೩ ರಂದು ತಹಸೀಲ್ದಾರ ರಾಯಚೂರು ರವರ ಮುಖಾಂತರ ವಿಚಾರಣೆಗೆ ಹಾಜರಾಗುವಂತೆ ವಿಚಾರಣಾ ನೋಟೀಸನ್ನು ಜಾರಿ ಮಾಡಲಾಗಿರುತ್ತದೆ. ಆದರೆ ನೀವು ಸದರಿ ದಿನಗಳಂದು ವಿಚಾರಣೆಗೆ ಹಾಜರಾಗಿರುವುದಿಲ್ಲ.
ಪ್ರಯುಕ್ತ ವಿಚಾರಣೆಗೆ ಹಾಜರಾಗುವಂತೆ ಕೊನೆಯ ಅವಕಾಶ ನೀಡಲಾಗುತ್ತಿದ್ದು, ಪತ್ರಿಕಾ ಪ್ರಕಟಣೆ ಹೊರಡಿಸಿದ ಒಂದು ವಾರದೊಳಗಾಗಿ ಈ ಕಾರ್ಯಾಲಯಕ್ಕೆ ಹಾಜರಾಗಿ ನಿಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನೂ ಇಲ್ಲವೆಂದು ಭಾವಿಸಿ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ವಿಚಾರಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಡಾ.ಕೆ.ಆರ್ ದುರಗೇಶ ಅವರು ತಿಳಿಸಿದ್ದಾರೆ
Megha News > Local News > ಅನಧೀಕೃತ ಗೈರು: ವಿಚಾರಣೆ ಹಾಜರಾಗಲು ನೋಟಿಸ್
ಅನಧೀಕೃತ ಗೈರು: ವಿಚಾರಣೆ ಹಾಜರಾಗಲು ನೋಟಿಸ್
Tayappa - Raichur08/01/2024
posted on
Leave a reply