ರಾಯಚೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಕಾಟ ಕೊಟ್ಟ ಘಟನ ಮಾನ್ವಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ತಾಲ್ಲೂಕಿನ ರಾಜೋಳ್ಳಿ ಗ್ರಾಮದ ಕುಡುಕ ನರಸಿಂಹ ಎಂದು ತಿಳಿದು ಬಂದಿದೆ. ಪೋಲಿಸ್ ಠಾಣೆಗೆ ನುಗ್ಗಿ ಠಾಣೆಗೆ ನನಗೆ ಹೆಂಡ್ತಿ ಬೇಕು, ಇಲ್ಲದಿದ್ದರೆ ಠಾಣೆ ಬಿಟ್ಟು ಹೋಗೊದಿಲ್ಲವೆಂದು ಪಟ್ಟು ಹಿಡಿದಿದ್ದಾನೆ. ಕುಡುಕನ ಕಾಟಕ್ಕೆ ಪೊಲೀಸರೇ ಸುಸ್ತಾಗಿ ಹೋಗಿದ್ದರು, ಪೊಲೀಸರ ಮಾತು ಕೇಳದೇ ಇಂಗ್ಲಿಷ್ನಲ್ಲಿ ಡೈಲಾಗ್ ಹೊಡೆದಿದ್ದಾನೆ. ಬಳಿಕ ನಾನು ಸಾಯೋ ವರೆಗೂ ಜಾಗ ಬಿಟ್ಟು ಹೋಗೊದಿಲ್ಲವೆಂದು ಪಟ್ಟು ಹಿಡಿದಿದ್ದ, ಪೊಲೀಸರ ತಲೆ ಬಿಸಿ ಹೆಚ್ಚಿಸಿದ್ದ ಈತ ತನಗೆ ಇಬ್ಬರು ಹೆಂಡತಿಯರಿದ್ದಾರೆ. ಅವರು ಬಿಟ್ಟು ಹೋಗಿದ್ದಾರೆ. ನನಗೆ ನನ್ನ ಹೆಂಡತಿಯರು ಬೇಕು. ನನ್ನ ಹೆಂಡ್ತಿರನ್ನ ನನ್ನ ಜೊತೆ ಕಳಿಸಿಕೊಡಿ ಅಂತ ಪಟ್ಟು ಹಿಡಿದಿದ್ದಾನೆ. ಒಂದು ವೇಳೆ ನನ್ನ ಹೆಂಡ್ತಿರು ನನ್ನ ಜೊತೆ ಬಾರದೇ ಇದ್ದರೆ ನಾನೂ ಇಲ್ಲೇ ಕುಳಿತುಕೊಳ್ಳುತ್ತೇನೆ ಅಂತ ತೆಲುಗಿನಲ್ಲಿ ಹೇಳಿದ್ದಾನೆ.
ಇಷ್ಟೆಲ್ಲಾ ಆದ ಬಳಿಕ ಮತ್ತೆ ಆತ ಲುಂಗಿ ಬಿಚ್ಚುತ್ತಾ ನ್ಯುಸೆನ್ಸ್ ಕ್ರಿಯೆಟ್ ಮಾಡತೊಡಗಿದ್ದ. ಕೊನೆಗೆ ಪೊಲೀಸರು ಎಚ್ಚರಿಕೆ ನೀಡಿ ಠಾಣೆಯಿಂದ ಹೊರ ಕಳುಹಿಸಿದ್ದಾರೆ.