ರಾಯಚೂರು,- ನಗರದಲ್ಲಿರುವ ಐತಿಹಾಸಿಕ ಮಾವಿನಕೆರೆಯನ್ನು ಮುಚ್ಚಲು ನಗರಸಭೆಯೇ ನಿರ್ಧಾರ ಮಾಡಿರುವ ಆರೋಪ ಕೇಳಿಬಂದಿದೆ. ನಗರದ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿಗಳೇ ತಂದು ಮಾವಿನಕೆರೆಗೆ ಹಾಕುತ್ತಿದ್ದಾರೆ. ಒಂದಡೆ ಜಿಲ್ಲಾಡಳಿತ ಮಾವಿನಕೆರೆಯನ್ನು ಅಭಿವೃದ್ದಿಪಡಿಸುವದಾಗಿ ಹೇಳುತ್ತಿದ್ದರೆ, ನಗರಸಭೆ ಮಾತ್ರ ಕಸವನ್ನು ಹಾಕಿ ಕೆರೆಯನ್ನು ಮುಚ್ಚುವ ಪ್ರಯತ್ನ ಮುಂದುವರೆದಿದೆ.
ಕಳೆದ ವರ್ಷ ಅಕ್ಟೋಬರ್ 2 ರಂದು ಗಾಂಧಿಜಯAತಿಯನ್ನುನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾವಿನಕೆರೆಯನ್ನು ಉಳಿಸಿಕೊಳ್ಳಲು ನ್ಯಾಯಾಧೀಶರು ಸಲಹೆ ನೀಡಿದ್ದರು. ಆದರೂ ನಗರಸಭೆ ಮಾತ್ರ ಸಂಬAಧವೇ ಇಲ್ಲದಂತೆ ನಡೆದುಕೊಳ್ಳುತ್ತಿದೆ. ರಾಜಕಾಲುವೆ ಕಸವನ್ನು ಮಾವಿನಕೆರೆಗೆ ಹಾಕಿ ಜೆಸಿಬಿಗಳ ಮೂಲಕ ಸಮತಟ್ಟುಗೊಳಿಸಲಾಗುತ್ತಿದೆ. ಆರೋಗ್ಯ ಇಲಾಖೆ ಆರೋಗ್ಯ ಕ್ಷೇಮ ಕೇಂದ್ರವಿದ್ದರೂ ನಗರ ಕಸವನ್ನು ಮಾವಿನಕೆರೆ ಹಾಕುತ್ತಿರುವದು ನಡೆಯುತ್ತಲೇ ಇದೆ. ಮಾವಿನಕೆರೆಯನ್ನು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿಪಡಿಸುವ ಯೋಜನೆ ಜಾರಿಯಾಗುವ ಮುನ್ನವೇ ಅತಿಕ್ರಮಣವಾದರೂ ಆಶ್ಚರ್ಯಪಡುವಂತಿಲ್ಲ. ಈಗಾಗಲೇ ಮಾವಿನಕೆರೆ ಮೂಲ ನಕ್ಷೆಯನ್ನು ಬದಲಾಯಿಸಲಾಗಿದೆ. ಕೆರೆಯಲ್ಲಿಯೇ ಖಾಸಗಿ ವ್ಯಕ್ತಿಗಳು ಜಮೀನು ನಮ್ಮದು ಎನ್ನುತ್ತಿದ್ದಾರೆ. ಮತ್ತೊಂದ ಕಡೆ ಜಲಮೂಲ ಉಳಿಸಲು ಕೆರೆಗಳನ್ನು ಅಭಿವೃದ್ದಿಪಡಿಸುವದಾಗಿ ಹೇಳುವ ಸರ್ಕಾರಗಳು ಇರುವ ಕೆರೆಯನ್ನು ಮುಚ್ಚಿಹಾಕಿ ಚರಂಡಿ ನೀರು ಕೆರೆ ಹರಿಸಿದರೂ ಕೇಳುವವರೇ ಇಲ್ಲ. ಸಚಿವರು,ನ್ಯಾಯಾಧೀಶರ ಸೂಚನೆಗೂ ಕ್ಯಾರೆ ಎನ್ನದೇ ನಗರಸಭೆ ನಡೆದುಕೊಳ್ಳುತ್ತಿರುವದು ವಿಪರ್ಯಾಸ.
Megha News > Local News > ಮಾವಿನಕೆರೆಗೆ ನಗರಸಭೆಯಿಂದ ಕಸದ ರಾಶಿ: ಒಂದಡೆ ಅಭಿವೃದ್ದಿಯ ಮಾತು, ಮತ್ತೊಂಡುಕಡೆ ಮುಚ್ಚುವ ಹುನ್ನಾರ
ಮಾವಿನಕೆರೆಗೆ ನಗರಸಭೆಯಿಂದ ಕಸದ ರಾಶಿ: ಒಂದಡೆ ಅಭಿವೃದ್ದಿಯ ಮಾತು, ಮತ್ತೊಂಡುಕಡೆ ಮುಚ್ಚುವ ಹುನ್ನಾರ
Tayappa - Raichur12/01/2024
posted on
Leave a reply