ರಾಯಚೂರು: ತಾಲ್ಲೂಕಿನ ಮಂಡಲಗೇರಾ ಗ್ರಾಮದ ಹತ್ತಿರವಿರುವ ರಾಯಚೂರು ಗದ್ವಾಲ್ ಗಡಿ ಚೆಕ್ ಪೋಸ್ಟ್ನಲ್ಲಿ ಟೆಂಪೋ ವಾಹನದ ಡ್ರೈವರ್ ಹಣ ಕೊಡಲಿಲ್ಲವೆಂದು ಪೋಲಿಸರು ಲಾಟಿಯಿಂದ ಮನ ಬಂದಂತೆ ಥಳಿಸಿದರ ಘಟನೆ ನಡೆದಿದೆ.
ರಾಯಚೂರಿನಿಂದ ಗದ್ವಾಲ್ ಕಡೆ ಮಾರ್ಗವಾಗಿ ತೆರಳುತಿರುವ ಟೆಂಪೋ ವಾಹನವನ್ನು ಮಂಡಲ ಗೇರಾ ಸಮೀಪವಿರುವ ಗಡಿ ಚೆಕ್ ಪೋಸ್ಟ್ ನಲ್ಲಿ ಸಂಜೆ ಪೋಲಿಸರು ತಪಾಸಣೆ ಮಾಡಿದ್ದಾರೆ.
ವಾಹನ ಖಾಲಿ ಇದ್ದು, ಪೋಲಿಸರು ಈ ವೇಳೆ 2 ಸಾವಿರ ಹಣ ಕಟ್ಟಬೇಕು ಎಂದು ಬೆದರಿಸಿದ್ದಾರೆ. ಅದಕ್ಕೆ ಡ್ರೈವರ್ ಅಷ್ಟು ಇಲ್ಲ ಎಂದು ಹೇಳಿದಾಗ ಡ್ರೈವರ್ ಬಟ್ಟೆ ಧರಿಸಿಲ್ಲ ಹಣ ಪಾವತಿಸಬೇಕು ಎಂದು ನಿಂದಿಸಿ ಲಾಟಿಯಿಂದ ತಳಿಸಿದ್ದಾರೆ. ತೆಲಂಗಾಣ ಮೂಲದ ಡ್ರೈವರ್ ಸುರೇಶ್ ಎಂದು ತಿಳಿದು ಬಂದಿದೆ.