ರಾಯಚೂರು. ಕೃಷ್ಣನದಿಗೆ ನಿರ್ಮಿಸಿರುವ ಸೇತುವೆ ದುರಸ್ತಿ ಕಾಮಗಾರಿಗೆ ನಿನ್ನೆಯಿಂದ ಸಂಚಾರ ಸ್ಥಗಿತಗೊಳಿಸಿ, ಕಾಮಗಾರಿ ಬರದಿಂದ ಸಾಗದೆ.
ಕೃಷ್ಣನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹಳೆಯದಾಗಿದ್ದು ಕಬ್ಬಿಣದ ರಾಡ್ ಗಳು ಮೇಲೆದ್ದು ಸಂಚಾರಕ್ಕೆ ಅನಾನುಕೂಲವಾಗಿತ್ತು, ಈ ಹಿನ್ನೆಲೆ ದುರಸ್ತಿಗೊಳಿಸಲು ಮುಂದಾಗಿದ್ದು, ಜ.14 ಸಂಕ್ರಾಂತಿ ಮತ್ತು ಮೈಲಾಪೂರ ಜಾತ್ರೆ ಹಿನ್ನೆಲೆಯಲ್ಲಿ ಸೇತುವೆ ದುರಸ್ತಿ ಕಾಮಗಾರಿ ಮುಂದೂಡಲಾಗಿತ್ತು, ಸಂಕ್ರಾಂತಿ, ಜಾತ್ರೆ ಮುಗಿದಿದ್ದು, ನಿನ್ನೆಯಿಂದ ದುರಸ್ತಿ ಕಾಮಗಾರಿ ಬರದಿಂದ ಸಾಗಿದೆ.
ಕಾಮಗಾರಿ ಆರಂಭವಾಗಿದ್ದು, ದುರಸ್ತಿ ಮತ್ತು ರಸ್ತೆ ಡಾಂಬರೀಕರಣ ಮಾಡಿ ಸಂಚಾರಕ್ಕೆ ಅನು ಕೂಲ ಮಾಡಿಕೊಡಲು 45 ದಿನಗಳ ಸಮಯ ನೀಡಲಾಗಿದೆ, 45 ದಿನಗಳ ಬಳಕೆ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ, ಈ ಹಿನ್ನೆಲೆಯಲ್ಲಿ ಹೈದರಾಬಾದ್‌ಗೆ ಹಾಗೂ ಯಾದಗಿರಿ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದು ಈ ಹಿಂದೆ ಸೂಚನೆ ನೀಡಲಾಗಿದೆ, ಹಾಗೂ ಹೈದರಾಬಾದ್ ಕಡೆಗೆ ತೆರಳುವ ವಾಹನಗಳು ಗದ್ವಾಲ್ ಹಾಗೂ ಜುರಾಲ್ ಮಾರ್ಗವಾಗಿ ತೆರಳಲು ಸೂಚನೆ ನೀಡಿದೆ.
ವಾಹನಗಳ ಸವಾರರು ಈ ಮಾರ್ಗದಲ್ಲಿ ಸಂಚ ರಿಸಿ 45 ದಿನಗಳ ಬಳಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.