ರಾಯಚೂರು.ಆದಾಯಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಆರೋಪದ ಮೇಲೆ ಕ್ಯಾಶೋಟೆಕ್ ಸಂಸ್ಥೆಯ ಯೋಜನಾಧಿಕಾರಿ ಶರಣಪ್ಪ ಪಟ್ಟೇದ್ ಇವರನ್ನು ಅಮಾನತುಗೊಳಿಸುವಂತೆ ಲೋಕಾ ಯುಕ್ತರು ಪತ್ರ ಬರೆದು ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಲೋಕಾಯುಕ್ತರು ಶರಣಪ್ಪ ಪಟೇಲ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಮಾಡಮಾಲಾ ಗಿತ್ತು, ದಾಳಿಯ ಸಂದರ್ಭದಲ್ಲಿ ಶೇ. 150ಕ್ಕೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿತ್ತು. ದಾಳಿಯ ನಂತರ ಸೇವೆಯಿಂದ ಬಿಡುಗಡೆಗೊಳಿಸಬೇಕಿತ್ತು. ಹೊರಗುತ್ತಿಗೆ ಆಧಾರದ ಮೇಲೆ ಸೇವೆಯಲ್ಲಿರುವ ಶರಣಪ್ಪ ಪಟ್ಟೆದ್ ಇವರು ಇಲ್ಲಿಯವರೆಗೆ ಸೇವೆಯಲ್ಲಿ ಮುಂದುವರೆದಿದ್ದಾರೆ. ಯೋಜನಾಧಿಕಾರಿಯಾಗಿ ಸೇವೆಯಲ್ಲಿ ಮುಂದು ವರೆದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕೂಡಲೇ ಅಮಾನತುಗೊಳಿಸು ವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಲೋಕಾಯುಕ್ತ ದಾಳಿಗೆ ಒಳಗಾದ ಪ್ರಕರಣ ಗಳಲ್ಲಿ ಸರ್ಕಾರಿ ನೌಕರರನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಲಾಗುತ್ತದೆ, ಆದರೆ ಶರಣಪ್ಪ ಪಟ್ಟ ಪ್ರಕರಣದಲ್ಲಿ ಮಾತ್ರ ಯಾವುದೇ ಕ್ರಮ ವಾಗದೆ ಇರುವುದು ಆಶ್ಚರ್ಯದ ಸಂಗತಿ. ದಾಳಿ ನಡೆದು ಅಕ್ರಮ ಆಸ್ತಿ ಪತ್ತೆಯಾಗಿರುವ ಮಾಹಿತಿ ಇಲಾಖೆಗೆ ಒದಗಿಸಿದ್ದರು, ಸೇವೆಯಲ್ಲಿ ಮುಂದು ವರೆದಿದ್ದಾರೆ ನೂರಾರು ಕೋಟಿ ಹೆಚ್ಚುವರಿ ಪತ್ತೆಯಾಗಿದ್ದರಿಂದ ಕೂಡಲೇ ಅಮಾನತು ಗೊಳಿಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಪತ್ತೆಯಾ ಗಿರುವ ಹೆಚ್ಚುವರಿ ಆದಾಯದ ಆಸ್ತಿ, ಇರುವ ಕುರಿತಂತೆ ಲೋಕಾಯುಕ್ತ ಇಲಾಖೆ ಪರಿಶೀಲನೆ ನಡೆಸಿದ್ದು, ಸ್ಥಿರ ಮತ್ತು ಚರ ಆಸ್ತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದ್ದು, ಆದಾಯಕ್ಕಿಂತ 100 ಪಟ್ಟು ಹೆಚ್ಚಿನ ಆಸ್ತಿ ಹೊಂದಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆದಾಯ ಮೂಲದ ತನಿಖೆ ಮುಂದುವರೆದಿದೆ, ಬ್ಯಾಂಕ್ ದಾಖಲೆ ಹಾಗೂ ಜಮೀನು ಮತ್ತು ಕಟ್ಟಡಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಸಂಬಂಧಿಗಳ ಹೆಸರಿನಲ್ಲಿ ಮತ್ತು ಸ್ವಂತದ್ದಾಗಿ ಹೊಂದಿರುವ ಮಾಹಿತಿ ಆಧರಿಸಿ ಕ್ರಮಕ್ಕೆ ಲೋಕಾ ಯುಕ್ತರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಕೂಡಲೇ ಕ್ರಮಕ್ಕೆ ಲೋಕಾಯುಕ್ತ ಉಪಾಧ್ಯಕ್ಷಕರು ಪತ್ರ ಸಹ ಬರೆದಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಯೋಜನಾಧಿಕಾರಿ ಶರ ಣಪ್ಪ ಪಟೇಲ್ ಕಾರ್ಯನಿರ್ವಹಿಸಿ ಸಿಕ್ಕಿದ್ದು ಪ್ರಭಾವ ಬಳಸಿ ಯಾವುದೇ ಇಲಾಖೆಯಿಂದ ಕ್ರಮವಾಗದಂತೆ ತಡೆಯುವಲ್ಲಿ ಯಶಸ್ವಿಯಾ ಗಿದ್ದಾರೆ ಎಂಬ ಆರೋಪವಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಕ್ಯಾಶೋಟೆಕ್ ಸಂಸ್ಥೆಯ ಯೋಜನಾಧಿಕಾರಿ ಬದಲಾಗುತ್ತದೆ ಎಂಬುದೇ ಪ್ರಶ್ನೆಯಾಗಿದೆ.