ರಾಯಚೂರು. ನಗರಸಭೆಯು ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ನಗರಸಭೆ ವ್ಯಾಪ್ತಿಯಲ್ಲಿ ಬರುವ ನಗರಸಭೆ ಮಳಿಗೆಗಳು ಹಾಗೂ ಐಡಿಎಸ್ಎಂಟಿ ಮಳಿಗೆಗಳ ಬಹಿರಂಗ ಹರಾಜು ಫೆ. 28 ರಿಂದ ಪ್ರಾರಂಭವಾಗಿ ಮಾ.7ರವರೆಗೆ ನಡೆಯುತ್ತಿದ್ದು ಡಿಡಿ ಸಹಿತ ಅರ್ಜಿಗಳನ್ನು ಸಲ್ಲಿಸಲು ಫೆ. 27 ರಂದು ಸಾಯಂಕಾಲ 5.30ರ ಒಳಾಗಾಗಿ ನಗರಸಭೆ ಕಚೇರಿಗೆ ಸಲ್ಲಿಸಬೇಕಾಗಿದೆ.
ನಗರಸಭೆ ಮಳಿಗೆಗಳು ಹಾಗೂ ಐಡಿಎಸ್ಎಂಟಿ ಮಳಿಗೆಗಳ ಬಾಡಿಗೆದಾರರು ಒಂದು ವಾರದ ಒಳಗಾಗಿ ಎಲ್ಲಾ ಮಳಿಗೆಗಳನ್ನು ಖಾಲಿ ಮಾಡಿ, ನಗರಸಭೆ ಸ್ವಾಧೀನಕ್ಕೆ ನೀಡಲು ಸೂಚಿಸಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾ ಗುವುದು ನಗರಸಭೆಯೊಂದಿಗೆ ಸಹಕರಿಸಲು
ನಗರಸಭೆ ಪೌರಾಯಕ್ತರು ತಿಳಿಸಿದ್ದಾರೆ.