ರಾಯಚೂರು. ದಾಖಲೆಗಳಿಲ್ಲದೇ ತೆಲಂಗಾಣದಿಂದ ಕಾರನಲ್ಲಿ ತೆರಳುತ್ತಿದ್ದ ವ್ಯಕ್ತಿಯಿಂದ ನಾಲ್ಕು ಲಕ್ಷ ರೂ ಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಗಡಿ ಚೆಕ್ ಪೋಸ್ಟನಲ್ಲಿ ವಾಹನ ತಪಾಸಣೆ ನಡೆಸಿದಾಗ ಸಿಫ್ಟ ಕಾರ (ಟಿಎಸ್-೨೩,ಇಎಸ್೭೩೬೧) ವಾಹನದಲ್ಲಿ ೪ ಲಕ್ಷ ರೂ ನಗದು ಹಣ ಪತ್ತೆಯಾಗಿದೆ. ಹಣ ವಶಪಡಿಸಿಕೊಂಡು ಜಿಲ್ಲಾ ಖಜಾನೆಗೆ ಜಮಾ ಮಾಡಲಾಗಿದೆ ಎಂದು ಎಂಸಿಸಿ ತಂಡ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕರಾಂ ಪಾಂಡ್ವೆ ತಿಳಿಸಿದ್ದಾರೆ.