Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ರಿಮ್ಸ್ 12ನೇ ಘಟಿಕೋತ್ಸವ, ಪದವಿ ಪಡೆದ ವಿದ್ಯಾರ್ಥಿಗಳು ದೇಶಕ್ಕೆ ಕೀರ್ತಿ ತರಲು ಶ್ರಮಿಸಿ: ಮೊಹಮ್ಮದ ಮೊಹಸಿನ್

ರಿಮ್ಸ್ 12ನೇ ಘಟಿಕೋತ್ಸವ, ಪದವಿ ಪಡೆದ ವಿದ್ಯಾರ್ಥಿಗಳು ದೇಶಕ್ಕೆ ಕೀರ್ತಿ ತರಲು ಶ್ರಮಿಸಿ: ಮೊಹಮ್ಮದ ಮೊಹಸಿನ್

ರಾಯಚೂರು:- ಪೋಷಕರ ಹಾಗೂ ಬೋಧಕ ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳು ತಮ್ಮ ಸ್ವಂತಃ ಪರಿಶ್ರಮದಿಂದ ಪದವಿಯನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುವ ಮೂಲಕ ಪೋಷಕರಿಗೆ, ಕಾಲೇಜಿಗೆ ಹಾಗೂ ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು ಎಂದು ಕಾರ್ಮಿಕ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್ ಅವರು ಹೇಳಿದರು.

ನಗರದ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ 12ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯಿಂದ ಪದವಿಯನ್ನು ಪಡೆದಯುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಉತ್ತಮ ಜ್ಞಾನವನ್ನು ಪಡೆದುಕೊಳ್ಳಬೇಕು. ಜೊತೆಗೆ ಜ್ಞಾನವೆಂಬುವುದು ಹಂಚಿಕೊಳ್ಳಬಹುದಾದ ಏಕೈಕ ವಸ್ತುವಾಗಿದ್ದು, ಇದನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಮತ್ತು ಅವರಿಂದ ಇನ್ನಿತರ ಜ್ಞಾನವನ್ನು ಪಡೆಯಲು ವಿದ್ಯಾರ್ಥಿಗಳು ಮುಂದಾಗಬೇಕು ಇದರಿಂದ ಜೀವನದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ ಎಂದರು.
ಇದೇ ವೇಳೆ ಜೆಎಸ್‌ಎಸ್ ಎಂಸಿ ಪ್ರಾಂಶುಪಾಲರು ಹಾಗೂ ಜೆಎಸ್‌ಎಸ್ ಎಎಚ್‌ಇಆರ್‌ನ ನಿರ್ದೇಶಕ ಡಾ.ಹೆಚ್ ಬಸನಗೌಡಪ್ಪ ಅವರು ಮಾತನಾಡಿ, ಇಂದಿನ ಒತ್ತಡದ ಜೀವನವನ್ನು ಮರೆತು ವಿದ್ಯಾರ್ಥಿಗಳು ಕಲಿಕೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಹೊಂದಿರಬೇಕಾಗಿರುವುದು ಅಗತ್ಯವಾಗಿದ್ದು, ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ, ನೀವು ನಿಮ್ಮ ಸ್ವಂತ ಅದೃಷ್ಟವನ್ನು, ವೈಫಲ್ಯಗಳನ್ನು ಯಶಸ್ಸಿಗಿಂತ ಹೆಚ್ಚಿನದನ್ನು ಕಲಿಸಲು ಪ್ರಯತ್ನಿಸಿದಲ್ಲಿ ನಿಮ್ಮ ವೃತ್ತಿಜೀವನದ ಉತ್ತುಂಗವನ್ನು ತಲುಪಲು ಸಾಧ್ಯವಾಗುತ್ತದೆಯೆಂದು ತಿಳಿಸಿದರು.
ವೈದ್ಯಕೀ ಸಲಹಾ ಮಂಡಳಿಯ ವೈದ್ಯಕೀಯ ಸಲಹೆಗಾರ ಡಾ.ಶರಣಬಸಪ್ಪ.ಎಸ್ ಕಾರ್ಭಾರಿ ಮಾತನಾಡಿ, ವೃತ್ತಿಜೀವನವನ್ನು ಆನಂದಿಸುವ ಜೊತೆಗೆ ಸಮಾಜಕ್ಕೆ ಉತ್ತಮ ಸೇವೆಯನ್ನು ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಎಮ್ಸ್ ಸಂಸ್ಥೆಯ ನಿರ್ದೇಶಕ ಡಾ.ರಮೇಶ್ ಬಿ. ಹೆಚ್ ಮಾತನಾಡಿ, ವೈದ್ಯ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು ವೈದ್ಯ ನಾರಾಯಣ ಭವೋ ಎಂಬ ಗಾದೆಗೆ ತಕ್ಕಂತೆ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವಂತೆ ವೈದ್ಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇನ್ನು ಕೊರೊನಾ ಸಮಯದಲ್ಲಿ ವೈದ್ಯಕೀಯ ಕಲಿಕೆಯೊಂದಿಗೆ ವೈದ್ಯರಿಗೆ ಸಹಕಾರ ನೀಡುವ ಮೂಲಕ ಕೋವಿಡ್ ಮಹಾಮಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದು ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಘಟಿಕೋತ್ಸವದಲ್ಲಿ ಒಟ್ಟು 130 ವಿದ್ಯಾರ್ಥಿಗಳು ಪದವಿ ಪಡೆದರು. ಭಾರತೀಯ ಸೇನೆಯ ನಿವೃತ್ತ ಸೈನಿಕ ಕರ್ನಲ್ ವೆಂಕಟೇಶ ನಾಯಕ, ಡಾ. ಅರವಿಂದ್ ಎಸ್ ಸಂಗಾವಿ, ಪ್ರಾಂಶುಪಾಲರಾದ ಡಾ. ಬಸವರಾಜ್ ಎಂ ಪಾಟೀಲ್, ಪ್ರಾಧ್ಯಾಪಕ ಡಾ. ಮಂಜುನಾಥ್, ವಿದ್ಯಾರ್ಥಿಗಳ ಕುಟುಂಬ ಸದಸ್ಯರು, ಪ್ರಾಧ್ಯಾಪಕರು, ಹಳೆಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗು ಆಡಳಿತ ಕಚೇರಿಯ ಎಲ್ಲಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Megha News