Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Crime News

ಆಹಾರ ಸೇವಿಸಿ ಇಬ್ಬರು ಮಕ್ಕಳ ಸಾವು, ಮೂರು ಜನರು ಅಸ್ವಸ್ಥ

ಆಹಾರ ಸೇವಿಸಿ ಇಬ್ಬರು ಮಕ್ಕಳ ಸಾವು, ಮೂರು ಜನರು ಅಸ್ವಸ್ಥ

ರಾಯಚೂರು.ತಾಲ್ಲೂಕಿನ‌ ವಡ್ಲೂರು ಕ್ರಾಸ್ ಬಳಿಯ ಮನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರೂ ಮಕ್ಕಳು ಮೃತಪಟ್ಟಿದ್ದು,ಮೂವರು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ಭಾನುವಾರ ನಡೆದಿದೆ.

ಆರತಿ (7),ಪ್ರಿಯಾಂಕ (9) ಮೃತಪಟ್ಟಿದ್ದು, ಹುಸೇನಮ್ಮ (35) , ಮಾರುತಿ (60) ಮತ್ತು ಲಕ್ಷಣ (60) ಅಸ್ವಸ್ಥಗೊಂಡು ನಗರದ ರಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ ಊಟ ಸಮಯದಲ್ಲಿ ಚಪಾತಿ , ಹೆಸರಕಾಳು, ಅನ್ನ ಸಾಂಬರು ಸೇವಿಸಿದ್ದ ಮಕ್ಕಳು ಸೇರಿ ಕುಟುಂಬಸ್ಥರು ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ.
ಕೂಡಲೇ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮೂಲತಃ ಲಿಂಗಸೂಗೂರು ತಾಲ್ಲೂಕಿನ ಕಮಲದಿನ್ನಿ ಗ್ರಾಮದವರಾದ ಇವರು ರಾಯಚೂರು ತಾಲ್ಲೂಕಿನ ವಡ್ಲೂರು ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ಬಂದಿದ್ದರು. ಶಾಲೆಗೆ ರಜೆ ಇರುವ ಕಾರಣ ನಿಮಿತ್ತ ಮಕ್ಕಳು ಪೋಷಕರ ಬಳಿ ಇದ್ದರು.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News