ರಾಯಚೂರು.ಕ್ರೂಷರ್ ವಾಹನದ ಚಾಲಕ ಸೈಡ್ ಕೊಡಲಿಲ್ಲವೆಂಬ ಕಾರಣಕ್ಕೆ ಹಿಂಬಾಲಿಸಿ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ಲಿಂಗಸುಗೂರು ತಾಲೂಕಿನ ಮುದಗಲ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಹರಿಜನವಾಡ ಬಡಾವಣೆಯಲ್ಲಿ ಏ.26 ರಂದು ಮುದಗಲ್ ರಸ್ತೆಯಲ್ಲಿ ತೆರಳುತ್ತಿರುವಾಗ ರಫಿ ಎನ್ನುವ ಯುವಕ ಸೈಡ್ ಕೊಡುವಂತೆ ಕ್ರೂಷರ್ಗೆ ಹಾರ್ನ್ ಹೊಡೆದಿದ್ದ ಚಾಲಕ ಅರವಿಂದ ತಡ ಮಾಡಿದ್ದರಿಂದ ರಸ್ತೆಯಲ್ಲಿ ವಾಗ್ವಾದ ನಡೆಯಿತು.
ರಫಿ ಎನ್ನುವ ಯುವಕ 30 ಜನರೊಂದಿಗೆ ಮಾರಕಾಸ್ತ್ರಗಳನ್ನು ಇಡಿದುಕೊಂಡು ಮನೆಗೆ ತೆರಳಿ ದಾಂದಲೆ ನಡೆಸಿದ್ದಾನೆ, ಎಂದು ಅರವಿಂದ ಮುದಗಲ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
29 ಜನರ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿದ್ದು, ಪೋಲಿಸರು ತನಿಖೆ ಮುಂದುವರೆಸಿದ್ದಾರೆ.
ಈ ಕುರಿತು ಮುದಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.