ರಾಯಚೂರು. ಲೋಕಸಭಾ ಚುನಾವಣೆ ಪ್ರಚಾರ ತೀವ್ರಗೊಂಡಿದ್ದು, ಕಾಂಗ್ರೆಸ್ ನಾಯಕ ರವಿ ಬೋಸರಾಜ ನಡೆಸಿದ ಪ್ರಚಾರ ಮೆರವಣಿಗೆಯಲ್ಲಿ ಪಾಕಿಸ್ತಾನ ಜಿಂದಾಬಾದ ಎಂದು ಘೋಷಣೆಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರನಾಯಕ ಪರ ಮತಯಾಚನೆಗೆ ಮನೆ ಮನೆಗೆತೆರಳಿ ಮತಯಾಚನೆ ಮಾಡಿದ್ದರು. ಕಾರ್ಯಕರ್ತರು ಮೆರಣಿಗೆ ಮೂಲಕ ಆಗಮಿಸುತ್ತಿದ್ದಾಗ ಘೋಷಣೆಗಳನ್ನು ಹಾಕಿದ್ದಾರೆ. ವಿಡಿಯೋ ತಿರುಚಿ ದೇಶವಿರೋಧಿ ಘೋಷಣೆಗಳನ್ನು ಕೂಗಿದಂತೆ ವಿಡಿಯೂ ತಿರುಚಿ ವೈರಲ್ ಮಾಡಲಾಗಿದೆ. ಘಟನೆ ಸತ್ಯಾಸತ್ಯತೆ ಅರಿಯಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್.ಬಿ. ಇವರನ್ನುಭೇಟಿ ಮಾಡಿ ರವಿ ಬೋಸರಾಜ ದೂರು ನೀಡಿದ್ದಾರೆ. ಕೂಡಲೇ ವಿಡಿಯೋ ತಿರುಚಿ ಸಮಾಜ ಅಶಾಂತಿಗೆ ಕಾರಣವಾದ ಬಿಜೆಪಿಗರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಗಲ್ಲಿಗೇರಿಸಿ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಭೇಟಿ ಮಾಡಿದ ನಂತರ ಬೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ ಬೋಸರಾಜ ದುರುದ್ದೇಶದಿಂದ ವಿಡಿಯೂ ತಿರುಚಿ ವೈರಲ್ ಮಾಡಲಾಗಿದೆ. ಪ್ರಚಾರ ವೇಳೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿಲ್ಲ. ಘಟನೆ ಸತ್ಯಾಸತ್ಯತೆ ಅರಿಯಲು ತನಿಖೆ ನಡೆಸಿ ಯಾರೇ ಆರೋಪಿತರಾಗಿದ್ದರೂ ಗಲ್ಲಿಗೇರಿಸಿ ಎಂದು ಆಗ್ರಹಿಸಿದರು.
ರಾಯಚೂರಿನಲ್ಲಿ ಎಲ್ಲರೂ ಸೌಹಾರ್ದಯತೆಯಿಂದ ಬದುಕುತ್ತಿದ್ದಾರೆ. ಸಮಾಜದಲ್ಲಿ ದ್ವೇಷ ಹುಟ್ಟಿಸುವ ಪ್ರಯತ್ನ ನಡೆಸಲಾಗುತ್ತಿರುವ ಅಘಾತಕಾರಿಯಾಗಿದೆ. ತಪ್ಪು ಮಾಡಿದವರ ವಿರುದ್ದ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ.
ರಾಹುಲ ಗಾಂಧಿ ಯುವ ಬ್ರಿಗ್ರೇಡ್ ಅಧ್ಯಕ್ಷ ಅಂಬಾಜಿರಾವ ಮೈದನ್‌ಕರ ಇವರು ಜಿಲ್ಲಾಧಿಕಾರಿಯನ್ನು ಭೇಟ ಮಾಡಿ ಫೇಕ್ ವಿಡಿಯೋ ವೈರಲ್ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
ವಿಡಿಯೋ ತಿರುಚಿ ವೈರಲ್ ಮಾಡಿದವರು ಯಾರು ಎಂಬದು ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ. ಚುನಾವಣಾ ಪ್ರಚಾರ ತೀವ್ರಗೊಳ್ಳುತ್ತಿದ್ದಂತೆ ಕಾರ್ಯಕರ್ತರ ಮಧ್ಯೆ ಘರ್ಷಣೆ, ಸುಳ್ಳು ಸುದ್ದಿ ಹರಡುವದು, ವಿಡಿಯೋ ತಿರುಚುವ ಹಂತಕ್ಕೆ ಮುಂದಾಗಿರುವದು ಕಳವಳಕಾರಿ ಬೆಳವಣಿಗೆಯಾಗಿದೆ.
Megha News > Local News > ಪಾಕಿಸ್ತಾನ ಪರ ಘೋಷನೆ ನಕಲಿ ವಿಡಿಯೋ ವೈರಲ್: ಆರೋಪಿತರ ಪತ್ತೆಗೆ ರವಿ ಬೋಸರಾಜ ಎಸ್‌ಪಿಗೆ ದೂರು
ಪಾಕಿಸ್ತಾನ ಪರ ಘೋಷನೆ ನಕಲಿ ವಿಡಿಯೋ ವೈರಲ್: ಆರೋಪಿತರ ಪತ್ತೆಗೆ ರವಿ ಬೋಸರಾಜ ಎಸ್‌ಪಿಗೆ ದೂರು
Tayappa - Raichur01/05/2024
posted on
Leave a reply