ಮಸ್ಕಿ: ಬಿಸಿಲಿನ ತಾಪಮಾನಕ್ಕೆ ಬಸ್ ಕಂಡಕ್ಟರ್ ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಮೃತ ಕಂಡಾಕ್ಟರ್ ತಾಲ್ಲೂಕಿನ ಹಸಮಕಲ್ ಗ್ರಾಮದ ಮಲ್ಲಯ್ಯ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಲ್ಲಯ್ಯ ಕೆಲಸದ ನಿಮಿತ್ತ ಹಸಮಕಲ್ ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ಮಸ್ಕಿ ಪಟ್ಟಣದಲ್ಲಿ ಕೆಲಸ ಮುಗಿಸಿಕೊಂಡು ನಡೆದುಕೊಂಡು ಹೋಗುವ ವೇಳೆ ದಾರಿಯಲ್ಲಿ ಕುಸಿದು ಬಿದ್ದಿದ್ದಾನೆ.
ಸ್ಥಳೀಯರು ಕಂಡಕ್ಟರ್ ಮಲ್ಲಯ್ಯ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ದಾಖಲಿಸಲು ತೆರಳಿತ್ತಿರುವಾಗ ಸಾವನಪ್ಪಿದ್ದಾರೆ.