ರಾಯಚೂರು. ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬರಗಾಲ ಆವರಿಸಿದ್ದು, ಬಿಸಿಲಿನ ತಾಪಮಾನಕ್ಕೆ ಕೆರೆಯಲ್ಲಿನ ನೀರು ಹಾವಿಯಾ ಗಿವೆ, ಇದರಿಂದ ಕೆರೆಯಲ್ಲಿನ ಲಕ್ಷಾಂತರ ಮೀನು ಗಳು ಸಾನವಪ್ಪಿದೆ.
ತಾಲೂಕಿನ ಮನ್ಸಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮರ್ಚೆಡ್ ಗ್ರಾಮದ ಕೆರೆಯು ಸುಮಾರು 400 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದ್ದು, ಇದೀಗ ಕೆರೆಯ ನೀರು ಬಿಸಿಲಿಗೆ ಒಣಗಿ ಹೋಗಿದೆ, ಈ ಕೆರೆಯಲ್ಲಿ ಮನ್ಸಲಾಪೂರ ಮತ್ತು ಮರ್ಚೆಡ್ ಗ್ರಾಮದ ರೈತರು ಲಕ್ಷಾಂತರ ಪ್ರಮಾಣದಲ್ಲಿ ಮೀನು ಸಾಕಾಣಿಕೆ ಮಾಡಿ ಅವುಗಳನ್ನು ಇಡಿದು ಮಾರಾಟ ಮಾಡಿ ಜೀವನ ಸಾಗುತ್ತಿದ್ದಾರೆ.
ಕೆರೆಯು ಸಂಪೂರ್ಣ ಒದಗಿ ಹೋಗಿದ್ದರಿಂದ ಕೆರೆಯಲ್ಲಿ ಸಾಕಾಣಿಕೆ ಮಾಡಿದ ಮೀನುಗಳು ಸಾವನಪ್ಪಿವೆ, ಇದರಿಂದಾಗಿ ರೈತರ ಬದುಕನ್ನೇ ಕಸಿದುಕೊಂಡಿದೆ.
ಬರಗಾಲದಿಂದ ರೈತರು ಕಂಗಾಲಾಗಿದ್ದು, ಆರ್ಥಿ ಕವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಭೀಕರ ಬರಗಾಲದಿಂದ ಜೀವನ ನಡೆಸುವುದು ಸಂಕಷ್ಟ ವಾಗಿದೆ,
ಮರ್ಚಡ್ ಗ್ರಾಮದ ಕೆರೆಯು 400 ಎಕರೆ ವಿಸ್ತೀರ್ಣ ಹೊಂದಿದ್ದಯ, ತಾಲೂಕಿನಲ್ಲಿಯೇ ಅತ್ಯಂತ ಬೃಹತ್ ಕೆರೆಯಾಗಿದೆ, ಇದೀಗ ಕೆರೆಯಲ್ಲಿ ನೀರು ಬತ್ತಿ ಹೋಗಿದೆ. ಬಿಸಿಲಿನ ತಾಪಮಾನದ ಜೊತೆಗೆ ಕೆರೆಯಲ್ಲಿರುವ ನೀರು ಸಹ ಬತ್ತಿ ಹೋಗಿದ್ದು, ಜಲಚರಗಳಿಗೆ, ಹಾಗೂ ಜಾನುವಾರುಗಳಿಗಿ ನೀರಿಲ್ಲದೆ ಪರಿತಪಿಸುವಂ ತಾಗಿದೆ.
ಬಿಸಿಲಿಗೆ ನೀರು ಬತ್ತಿಹೋಗಿದ್ದು ಮೀನುಗಳು ಸಗ ಒಣಗಿದ ಕೆರೆಯುದ್ಧಕ್ಕೂ ಸತ್ತು ಬಿದ್ದಿವೆ. ಕೆರೆ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದ್ದು,
ರೈತರ ಕಣ್ಣಲ್ಲಿ ನೀರು ತರಿಸುವಂತಿದೆ.
ಕೆರಯಲ್ಲಿ ನೀಡಿದ್ದ ಸಂದರ್ಭದಲ್ಲಿ
ಸುಮಾರು 15 ಲಕ್ಷ ವೆಚ್ಚದಲ್ಲಿ ಲಕ್ಷಾಂತರ ಮೀನು ಮರಿಗಳನ್ನ ತಂದು ಕೆರೆಗೆ ಬಿಡಲಾಗಿತ್ತು,
ಮೀನುಗಳು ಬೆಳೆದು ಇಡಿದು ಮಾರಾಟ ಮಾಡಬೇಕಾದ ಸಂದರ್ಭದಲ್ಲಿ ಕೆರೆಯು ಬರಗಾಲದಿಂದ ಒಣಗಿ ಹೋಗಿದೆ, ಮೀನುಗಳು ಸತ್ತು ಹೋಗಿದ್ದರಿಂದ ಮೀನು ಸಾಕಾಣಿಕೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಹೆಚ್ಚು ಕುಟುಂಬಗಳು ಈಗ ಬೀದಿಗೆ ಬಿದ್ದಿವೆ.
ಈ ಬಗ್ಗೆ ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.