ರಾಯಚೂರು. ಜಿಲ್ಲಾಧಿಕಾರಿ ಕಚೇರಿ ಅವರಣ ದಲ್ಲಿ ಕಟ್ಟಡ ತ್ಯಾಜ್ಯ ತಂದು ಹಾಕಿ ಒತ್ತುವರಿ ಮಾಡಿದ್ದು, ಇದೀಗ ಜಿಲ್ಲಾಧಿಕಾರಿ ಕಾಂಪೌಂಡ್ ಗೋಡೆಯಿಂದ 30 ಅಡಿಯವರೆಗೆ ತಂತಿ ಬೇಲಿ ಹಾಕಿ ಎರಡನೇ ಹಂತದ ಒತ್ತವರಿ ಮುಂದುವರೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಕಾಂಪೌಂಡ್‌ನ ಎಡ ಭಾಗದಲ್ಲಿ ಖಾಸಗಿ ವ್ಯಕ್ತಿಗಳು ಜಾಗ ಒತ್ತುವರಿ ಮಾಡಿಕೊಂಡು ಕಟ್ಟಡ ತ್ಯಾಜ್ಯವನ್ನು ತಂದು ಸುರಿದು ಸಮತಟ್ಟ ಮಾಡಿಕೊಂಡಿದ್ದಾರೆ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಡ ಭಾಗಕ್ಕೆ ಯಾರು ಹೋಗದಂತೆ ತಡೆಯಲು ಕಾವಲುಗಾರರನ್ನು ಇಟ್ಟಿದ್ದಾರೆ ಆದರೆ ಅವರನ್ನು ಯಾರು ಇಟ್ಟಿದ್ದಾ ರೆಂಬುದು ಯಾರಿಗೂ ಗೊತ್ತಿಲ್ಲ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈ ಪ್ರದೇಶವು ಮುಳ್ಳು ಗಿಡ ಗಂಟಿಗಳಿಂದ ಇರುವುದರಿಂದ ಕಚೇರಿಗೆ ಬರುವ ಸಾರ್ವಜನಿಕರು ಜೊತೆಗೆ ಮಹಿಳೆಯರು ಮೂತ್ರ ವಿಸರ್ಜನೆಗೆ ತೆರಳುವುದು ಸಾಮಾನ್ಯ ಆದರೆ ಆ ಕಡೆ ಹೋಗದಂತೆ ಕಾವಲುಗಾರರು ತಡೆಯುತ್ತಿದ್ದಾರೆ. ಜನ ಸಾಮಾನ್ಯರಿಗೆ ಅವಾಶ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಬರುವ ಅಧಿಕಾರಿಗಳು,ಇಲಾಖೆ ಸಿಬ್ಬಂದಿಗಳು, ಹಾಗೂ ಪೊಲೀಸರಿಗೂ ಆ ಕಡೆ ಹೋಗದಂತೆ ಅಲ್ಲಿಯೇ ಟಿಕಾಣಿ ಹೋಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಇದ್ದು ಕಟ್ಟಡ ತ್ಯಾಜ್ಯ ಹಾಕಿ ಒತ್ತುವರಿ ಮಾಡದಂತೆ ತಡೆಯಲಾ ಗುತ್ತದೆ ಎಂದು ತಿಳಿಸಿದ್ದರು.
ಅದಾಗ್ಯೂ ಇದೀಗ ಮತ್ತೆ ಒತ್ತುವರಿ ಮುಂದುವ ರೆದಿದೆ, ಜಿಲ್ಲಾಧಿಕಾರಿ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ನೋಡಿ ನೊಂಡದಂತಿದ್ದಾರೆ ಎಂಬುದು ಬಾಸವಾಗುತ್ತದೆ.
ಕಚೇರಿ ಕಾಂಪೌಂಡ್ ಹತ್ತಿರ ಇಲ್ಲಿ ಯಾರೂ ಮೂತ್ರ ವಿಸರ್ಜನೆ ಮಾಡಬಾರದು ಎಂದು ಗೋಡೆ ಬರಹ ಬರೆಸಿದ್ದಾರೆ, ಜೊತೆಗೆ 30 ಅಡಿಯವರೆಗೆ ತಂತಿ ಬೇಲಿ ಹಾಕಿದ್ದಾರೆ, ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾಹಿತಿ ಇದ್ದರೂ ಇಲ್ಲದಂತಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.
ಖಾಸಗಿ ವ್ಯಕ್ತಿಗಳು ನಾಮಫಲಕ ಅಳವಡಿಸಿದ್ದು ಜೊತೆಗೆ ಪ್ರತೇಕ ಬೋರ್‌ವೆಲ್ ಕೊರೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಹೊಸ ಕಟ್ಟಡ ಯಕ್ಲಾಸಪೂರ ರಸ್ತೆಯಲ್ಲಿ ಹೊಸ ಜಿಲ್ಲಾಡಳಿತ ಭವನವ ನಿರ್ಮಾಣವಾಗಿದ್ದು, ಸ್ಥಳಾಂತರ ನಂತರ ಇಡೀ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ಒತ್ತುವರಿ ಮಾಡಿ ಗೋಡೆ ನಿರ್ಮಾಣ ಮಾಡಲಿದ್ದಾರೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.