ರಾಯಚೂರು, ಜೂ.೧೩- ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಚೇರಿ ಮೇಲೆ ಲೋಕಾಯುಕ್ತರು ಧಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ಲೋಕಾಯುಕ್ತ ಎಸ್ಪಿ ಶಶಿಧರ ನೇತೃತ್ವದಲ್ಲಿ ೧೫ ಜನ ಅಧಿಕಾರಿಗಳು ತೆರಳಿ ಸರ್ಕಾರದಿಂದ ಅನುಷ್ಠಾನಗೊಳಿಸಿರುವ ಯೋಜನೆಗಳು, ಸಬ್ಸಿಡಿ ಪಾವತಿ ಸೇರಿದಂತೆ ಇತರೆ ದಾಖಲೆಗಳ ಪರಿಶೀಲನೆ ನಡೆಸಿದರು.
ರಾಜ್ಯ ಲೋಕಾಯುಕ್ತರ ಸೂಚನೆ ಮೇರೆಗೆ ಕಚೇರಿ ದಾಖಲೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಸರ್ಕಾರ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಳಂಬ, ಹಣ ಬೇಡಿಕೆ ಸೇರಿದಂತೆ ಇತರೆ ದೂರುಗಳ ಆಧಾರದ ಮೇಲೆ ಪರಿಶೀಲನೆ ನಡೆದಿದೆ ಎಂದು ಹೇಳಲಾಗಿದೆ. ಬರಪರಿಹಾರ ಸೇರಿದಂತೆ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಯೋಜನೆಗಳಲ್ಲಿ ಅಕ್ರಮವಾಗಿರುವ ದೂರುಗಳ ಮೇಲೆ ದಾಖಲೆ, ದಾಸ್ತಾನು ಪರೀಶೀಲನೆ ನಡೆಸಲಾಯಿತು.
ಮುಂಗಾರು ಪ್ರಾರಂಭವಾಗಿದ್ದು ತೋಟಗಾರಿಕೆ ಕೈಗೊಳ್ಳುವ ರೈತರಿಗೆ ಸರ್ಕಾರದಿಂದ ನೀಡಬೇಕಾದ ಬೀಜ, ಸಸಿಗಳು ಹಾಗೂ ಪ್ರೋತ್ಸಾಹಧನ ಪರಿಶೀಲನೆ ಸಹ ನಡೆಸಲಾಯಿತು. ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.