ರಾಯಚೂರು. ಪ್ರೀತಿಯನ್ನು ನಿರಾಕರಿಸಿದಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಿಂಗಸೂಗುರು ತಾಲೂಕಿನ ಮುದಗಲ್ ಸಮೀಪದ ಕನಸಾಮಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಸಂತೋಷ (22) ವರ್ಷ ಎಂದು ತಿಳಿದು ಬಂದಿದೆ.
ಸಂತೋಷ ಅತ್ತಿಗೆ ತಂಗಿಯನ್ನು ಪ್ರೀತಿ ಮಾಡುತ್ತಿದ್ದ ಮದುವೆಗೆ ಒಪ್ಪದೇ ಇರುವುದರಿಂದ ಮನನೊಂದು ಮನೆಯಲ್ಲಿರುವ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಮುನ್ನಾ ವಾಟ್ಸ್ಆ್ಯಪ್ನ ಸ್ಟೇಟಸ್ನಲ್ಲಿ ನಾನು ಸತ್ತರು ಪ್ರೀತಿಗೋಸ್ಕರ ಸೋಲ್ತಿನಿ, ನಾನು ಒಬ್ಬ ಹುಚ್ಚು ಪ್ರೇಮಿʼ ಎಂದು ಫೋಟೊ ಜತೆಗೆ ಬರಹ ಹಾಕಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.