ರಾಯಚೂರು. ಸಂಭವ್ ಫೌಂಡೇಶನ್ ಮೈಕ್ರೋಸಾಫ್ಟ್ ಫಿಲಾಂತ್ರಪೀಸ್ ವತಿಯಿಂದ ಜಿಲ್ಲೆಯಲ್ಲಿ ವಿನೂತನವಾದ ಕಾರ್ಯಕ್ರಮವಾಗಿದೆ. ಮೈಕ್ರೋಸಾಫ್ಟ್ ಕಂಪನಿಯಿಂದ ರಾಯಚೂರು ತಾಲೂಕಿನ 9 ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದು, ಅದರ ಸದುಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಣದಲ್ಲಿ ಸಾಮಾಜಿಕ ಹೊಣೆಗಾರಿಕೆ ಅನುದಾನದ ಅಡಿಯಲ್ಲಿ ಸಂಭವ್ ಫೌಂಡೇಶನ್ ಮೈಕ್ರೋಸಾಫ್ಟ್ ಫಿಲಾಂತ್ರಪೀಸ್ ಇಂಡಿಯಾ ಸಹಯೋಗದೊಂದಿಗೆ ರಾಯಚೂರು ತಾಲೂಕಿನ 9ಶಾಲೆಗಳಿಗೆ ಕಂಪ್ಯೂಟರ್‌ಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ರಾಯಚೂರಿನ ತಾಲೂಕಿನ ದೇವಸೂಗೂರು ಸರ್ಕಾರಿ ಪ್ರೌಢ ಶಾಲೆ, ಪಂಚಾಮುಖಿ ಗಾಣಧಾಳ ಸರ್ಕಾರಿ ಪ್ರೌಢ ಶಾಲೆ, ಮರ್ಚೆಟಾಳ್ ಸರ್ಕಾರಿ ಪ್ರೌಢ ಶಾಲೆ, ಗುಂಜಳ್ಳಿ ಸರ್ಕಾರಿ ಪ್ರೌಢ ಶಾಲೆ, ಜೇಗರಕಲ್ ಸರ್ಕಾರಿ ಪ್ರೌಢ ಶಾಲೆ, ಮಟಮಾರಿ ಸರ್ಕಾರಿ ಪ್ರೌಢ ಶಾಲೆ, ಚಂದ್ರಬAಡಾ ಸರ್ಕಾರಿ ಪ್ರೌಢ ಶಾಲೆ, ಸಿಂಗನೋಡಿ ಸರ್ಕಾರಿ ಪ್ರೌಢ ಶಾಲೆ, ಎಲೆಬಿಚ್ಚಾಲಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಲಾಗಿದ್ದು, ಇದು ವಿನೂತನ ಕಾರ್ಯಕ್ರಮ ವಾಗಿದ್ದು, ದಾನಿಗಳು ನೀಡಿದ ಸೌಲಭ್ಯವನ್ನು ಮಕ್ಕಳು ಸರಿಯಾಗಿ ಬಳಸಿಕೊಳ್ಳಬೇಕು. ಅಲ್ಲದೆ ಮಕ್ಕಳಿಗೆ ಸರಿಯಾಗಿ ಸದ್ಬಳಕೆ ಮಾಡುವಂತೆ ಅಧಿಕಾರಿಗಳು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಸ್ಥೆ ವತಿಯಿಂದ ಮಕ್ಕಳಿಗೆ ಅನುಕೂಲವಾಗುತ್ತೆ ಎಂಬ ಆಸೆಯಿಂದ ಕಂಪ್ಯೂಟರ್‌ಗಳನ್ನು ನೀಡಿದ್ದು, ಅವರ ಆಸೆಯನ್ನು ನಿರಾಶೆ ಮಾಡದೆ ಮಕ್ಕಳು ಚೆನ್ನಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಕಂಪ್ಯೂಟರ್‌ನಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಬಂದಲ್ಲಿ ಕೂಡಲೇ ಅವರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು. ರಾಯಚೂರು ತಾಲೂಕಿನಲ್ಲಿ ಹೊಸ ಬೆಳವಣಿಗೆಯಾಗಿದ್ದು, ಮಕ್ಕಳು ಕಂಪ್ಯೂಟರ್ ಕಲಿಯುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ವೇಳೆ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಭಕ್ತವಾತ್ಸಲ್ ಅವರು ಮಾತನಾಡಿ, ಗ್ರಾಮೀಣ ಸಮುದಾಯಗಳು ಮತ್ತು ಶಾಲೆಗಳಲ್ಲಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವ ಬದ್ಧತೆಯೊಂದಿಗೆ ಮೊಟ್ಟ ಮೊದಲ ಡಿಜಿಟಲ್ ಕೌಶಲ್ಯ ಮತ್ತು ಕೃಷಿ-ಟೆಕ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ, ಪ್ರಾಯೋಗಿಕ ತರಬೇತಿ ಅವಧಿಗಳು ಮತ್ತು ನೈಜ ಸಮಯದ ಯೋಜನೆಗಳ ಮೂಲಕ ಹೊಸ-ಯುಗದ ಡಿಜಿಟಲ್ ಸಾಮರ್ಥ್ಯಗಳೊಂದಿಗೆ ಗ್ರಾಮೀಣ ಶಾಲೆಗಳು, ಶಿಕ್ಷಕರು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.
ಅಪೇಕ್ಷಿತ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಪ್ರಾಯೋಗಿಕ ಅನುಭವವನ್ನು ಬೆಳೆಸಲು ಮತ್ತು ಆಧುನಿಕ ಕೃಷಿ ಚಟುವಟಿಕೆಗಳಲ್ಲಿ ಈ ಸಾಮರ್ಥ್ಯಗಳನ್ನು ನಿಯೋಜಿಸಲು ಸಹಾಯ ಮಾಡಲು ಮೈಕ್ರೋಬಿಟ್ ಟೂಲ್‌ಕಿಟ್‌ಗಳೊಂದಿಗೆ ಶಾಲೆಗಳಲ್ಲಿ ತಂತ್ರಜ್ಞಾನ-ಸಕ್ರಿಯಗೊಳಿಸಿದ ಕಂಪ್ಯೂಟರ್ ಲ್ಯಾಬ್‌ಗಳನ್ನು ನಿರ್ಮಿಸಲು ನಾವು ಲೇಸರ್-ಕೇಂದ್ರಿತರಾಗಿದ್ದೇವೆ. ಈ ಕಾರ್ಯಕ್ರಮವು ಅದರ ಮೂಲದಲ್ಲಿ, ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಬೆಂಬಲಿಸಲು ಗ್ರಾಮೀಣ ಸಮುದಾಯಗಳನ್ನು ಡಿಜಿಟಲ್ ಸ್ಥಳೀಯ ನಾಗರಿಕರನ್ನಾಗಿ ಪರಿವರ್ತಿಸುವ ಆಶಯವನ್ನು ಹೊಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕಾಳಪ್ಪ ಬಡಿಗೇರ, ರಾಯಚೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ಭಂಡಾರಿ, ಸಂಸ್ಥೆಯ ರಾಜ್ಯ ಸಂಯೋಜಕರಾದ ರವಿ, ಸಂಸ್ಥೆಯ ಯೋಜನಾ ವ್ಯವಸ್ಥಾಪಕರಾದ ಅಮೆಯ್ಯ, ಸಂಸ್ಥೆಯ ತರಬೇತಿದಾರರಾದ ಸವಿತಾ, ನಂದಿನಿ, ರೇಣುಕಾ, ಅದಿತ್ಯ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.